ವಿಜಯಸಾಕ್ಷಿ ಸುದ್ದಿ, ರೋಣ : ತಾಲೂಕಿನ ಇಬ್ಬರು ಯುವತಿಯರು ಕಾಣೆಯಾಗಿದ್ದು, ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ರೋಣ ತಾಲೂಕಿನ ಮುಗುಳಿ ಗ್ರಾಮದ ಶ್ರುತಿ ಶರಣಪ್ಪಗೌಡ ಶಲವಡಿ(24) ಈಕೆ ಜುಲೈ 14ರಂದು ಮನೆಯಿಂದ ಹೋದವಳು ಇಲ್ಲಿಯವರೆಗೂ ಮರಳಿ ಮನೆಗೆ ಬಂದಿಲ್ಲ ಎಂದು ಕಾಣೆಯಾದ ಯುವತಿಯ ತಾಯಿ ರತ್ನವ್ವ ಶರಣಪ್ಪಗೌಡ ಶಲವಡಿ ರೋಣ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ತಾಲೂಕಿನ ಸಂಧಿಗವಾಡ ಗ್ರಾಮದ ವಿವಾಹಿತ ವಿದ್ಯಾರ್ಥಿನಿ ಶಶಿಕಲಾ ಉಮೇಶ ವಾಲ್ಮೀಕಿ (23) ಎಂಬುವರು ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು, ಮರಳಿ ಮನೆಗೆ ಬಂದಿಲ್ಲ ಎಂದು ಕಾಣೆಯಾದ ಮಹಿಳೆಯ ತಂದೆ ಬೊಮ್ಮಸಾಗರ ಗ್ರಾಮದ ಪಡಿಯಪ್ಪ ದಾನಸೂರ ರೋಣ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಈ ಎರಡೂ ಪ್ರಕರಣಗಳು ತನಿಖೆಯಲ್ಲಿದ್ದು, ಈ ಇಬ್ಬರು ಯುವತಿಯರ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಸಮೀಪದ ಅಥವಾ ರೋಣ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ರೋಣ ಪಿಎಸ್‌ಐ ಪ್ರಕಾಶ ಬಣಕಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.