ಗದಗ:- ಬೈಕ್ ಸ್ಕೀಡ್ ಆಗಿ ಬಿದ್ದು ಹಿಂಬದಿಯ ಸವಾರ ಸಾವನ್ನಪ್ಪಿದ ಘಟನೆ ಗದಗ ನಗರದ ಹೊರವಲಯದ ಗದ್ದಿ ಹಳ್ಳದ ಬಳಿ ಜರುಗಿದೆ. ಘಟನೆಯಿಂದ ಬೈಕ್ ಚಾಲಕನಿಗೆ ಗಾಯವಾಗಿದೆ.
Advertisement
ಗದಗದಿಂದ ಹಾತಲಗೇರಿ ಗ್ರಾಮಕ್ಕೆ ಹೊರಟಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಹಾತಲಗೇರಿ ಗ್ರಾಮದ 62 ವರ್ಷದ ವಿರೂಪಾಕ್ಷ ಮೃತಪಟ್ಟ ವ್ಯಕ್ತಿ ಎನ್ನಲಾಗಿದೆ.
ಬೈಕ್ ಸವಾರ ಶರಣಪ್ಪನಿಗೆ ಗಾಯವಾಗಿದ್ದು, ಈತನನ್ನು ಗದಗ ಜಿಮ್ಸ್ ಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬೆಟಗೇರಿ ಠಾಣಾ ಸಿಪಿಐ ಧೀರಜ್ ಶಿಂಧೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.