ಗದಗ: ಸರ್ಕಾರಿ ಶಾಲೆ ಅವ್ಯವಸ್ಥೆಯ‌ ತಾಣ: ಮಾರುಕಟ್ಟೆಯ ಅಂಗಡಿ ಮುಂದೆ ಮಕ್ಕಳಿಗೆ ಪಾಠ

0
Spread the love

ಗದಗ: ಗದಗ ನಗರದ ಈ ಸರ್ಕಾರಿ ಶಾಲೆಗೂ ಚರಂಡಿಗೂ ಎಲ್ಲದ ವೈರತ್ವ. ಸದಾ ಹಾವು ಮುಂಗುಸಿಯಂತಾ ಜಗಳ. ಮಳೆ ಬಂದರೆ ಸಾಕು ಚರಂಡಿ ತುಂಬಿ ಹರಿದು ಸ್ಕೂಲ್ ಒಳಗೆ ನುಗ್ಗುತ್ತದೆ. ಅಷ್ಟೇ ಮಕ್ಕಳು ಪಕ್ಕದ ಮಾರ್ಕೆಟ್ ಅಂಗಡಿಯ ಜಗಲಿಯಲ್ಲಿ ಕುಳಿತು ಪಾಠ ಕೇಳಬೇಕು. 60ಕ್ಕೂ ಹೆಚ್ಚು ಮಕ್ಕಳ ಈ ದುಸ್ಥಿತಿಗೆ ಯಾರು ಹೊಣೆ? ಏನಿದು ಶಾಲೆಯ ಕಥೆ ಮುಂದೆ ಓದಿ..

Advertisement

ಹೌದು ಗದಗನ ದತ್ತಾತ್ರೇಯ ರಸ್ತೆಯಲ್ಲಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮಾರುಕಟ್ಟೆಯ ಅಂಗಡಿ ಮುಂದೆ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದರಿಂದ ಏಳನೇಯ ತರಗತಿಯವರಗಿನ, ಶಾಲೆಯಾಗಿದ್ದು, ಭಾರಿ ಮಳೆಯಿಂದ ಶಾಲೆಯ ಮುಂದಿನ ಚರಂಡಿ ಬ್ಲಾಕ್ ಆಗಿ ಶಾಲೆಯ ಆವರಣಕ್ಕೆ ಮಳೆ ನೀರು ನುಗ್ಗಿದೆ. ಇದರಿಂದ ಶಾಲೆಯ ಒಳಗೆ ಹೊಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಆದ್ದರಿಂದ ಅಂಗಡಿಗಳ ಮುಂದೆ ಮಕ್ಕಳಿಗೆ ಶಿಕ್ಷಕರು ಪಾಠ ಮಾಡಿದ್ದಾರೆ. ಇದ್ದರಿಂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಸ್ಥಳಕ್ಕೆ ಗದಗ ಶಹರ ಬಿಇಒ ಆರ್ ಎಸ್ ಬುರಡಿ ಭೇಟಿ

ಮಕ್ಕಳನ್ನು ಬೀದಿ ಪಕ್ಕದಲ್ಲಿ ಕುಳಿಸಿದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇನ್ನೂ ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಗದಗ ಶಹರ ಬಿಇಒ ಆರ್ ಎಸ್ ಬುರಡಿ ಭೇಟಿ ನೀಡಿ ಪರೀಶಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳನ್ನು ಅಂಗಡಿ ಎದುರು ಕೂರಿಸಿದಕ್ಕೆ ಬಿಇಓ ಗರಂ ಆಗಿದ್ದು,

ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಕ್ಷಣ ವಿದ್ಯಾರ್ಥಿಗಳನ್ನು ಪಕ್ಕದ ಶಾಲೆಗೆ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಯಿತು. ಅದಲ್ಲದೆ ನಗರಸಭೆ ವಿರುದ್ಧ ಸರ್ಕಾರಿ ಶಾಲೆ ಶಿಕ್ಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.


Spread the love

LEAVE A REPLY

Please enter your comment!
Please enter your name here