ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿಯಲ್ಲಿ ಭಾಗವಹಿಸಲಿರುವ ಗಜಪಡೆ ಮೈಸೂರಿಗೆ ತಲುಪಿದೆ. ಇನ್ನೂ ಇಂದು ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ಅರಮನೆಗೆ ಎಂಟ್ರಿ ಕೊಡಲಿವೆ. ಮೈಸೂರಿನ ಅಶೋಕಪುರಂನ ಅರಣ್ಯ ಭವನದಿಂದ ಮೆರವಣಿಗೆ ಮೂಲಕಜನಪದ ಕಲಾತಂಡಗಳೊಂದಿಗೆ ಅರಮನೆಗೆ ಆಗಮಿಸಲಿವೆ.
ಜನರು ಕಾಲ್ನಡಿಗೆ ಮೆರವಣಿಗೆಯಲ್ಲಿ ಬರುವ ಆನೆಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ. ಇತ್ತೀಚೆಗೆ ಹುಣಸೂರಿನ ವೀರನಹೊಸಹಳ್ಳಿಯಿಂದ ಗಜಪಯಣದಲ್ಲಿ ಮೈಸೂರಿಗೆ ಆಗಮಿಸಿದ್ದವು. ಮೊನ್ನೆಯಿಂದ ಇಂದಿನವರೆಗೆ ಅರಣ್ಯಭವನದಲ್ಲಿ ವಾಸ್ತವ್ಯವಿದ್ದು,
ಇಂದು ಅರಣ್ಯ ಭವನದಿಂದ ಅರಮನೆಯಂಗಳಕ್ಕೆ ಆನೆಗಳು ಬರಲಿವೆ. ಅರಣ್ಯ ಭವನದಲ್ಲಿ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಿದ್ದು, ನಂತರ ಕಾಲ್ನಡಿಗೆ ಮೂಲಕ ಅರಮನೆಯತ್ತ ಸಾಗಲಿವೆ. ಬೆಳಗ್ಗೆ 10:10 ರಿಂದ 10:30 ಶುಭಗಳಿಗೆಯಲ್ಲಿ ಪೂಜೆ ಸಲ್ಲಿಸಿ ಜಿಲ್ಲಾಡಳಿತ, ಅರಮನೆ ಆಡಳಿತ ಮಂಡಳಿಯಿಂದ ಆನೆಗಳಿಗೆ ಸ್ವಾಗತ ಮಾಡಲಿದ್ದಾರೆ.