ಮಂಡ್ಯ: ಅಂಗಡಿಗಳ ಬೀಗ ಒಡೆದು ಸರಣಿ ಕಳ್ಳತನ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ. ಬಸವೇಶ್ವರ ಮೆಡಿಕಲ್ ಸ್ಟೋರ್, ಐಸ್ ಕ್ರೀಮ್ ಪಾರ್ಲರ್ ಹಾಗೂ ನಂದಿನಿ ಪಾರ್ಲರ್ ನಲ್ಲಿ ಕಳ್ಳತನ ಮಾಡಿದ್ದು, ಮೆಡಿಕಲ್ ಸ್ಟೋರ್ ಬೀಗ ಮುರಿದು 60 ಸಾವಿರ, ಐಸ್ ಕ್ರೀಂ ಪಾರ್ಲರ್ ನಲ್ಲಿ 4 ಸಾವಿರ, ನಂದಿನಿ ಪಾರ್ಲರ್ ನಲ್ಲಿ 10 ದೋಚಿದ್ದಾರೆ.
ಕಬ್ಬಿಣದ ರಾಡ್ ಬಳಸಿ ಅಂಗಡಿಗಳ ಬೀಗವ ಮುರಿದು ಒಳನುಗ್ಗಿರುವ ಕಳ್ಳರು, ಮೊಬೈಲ್ ಟಾರ್ಚ್ ಹಾಕಿಕೊಂಡು ಹಣ ಕಳವು ಮಾಡುತ್ತಿರೊ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಈ ಘಟನೆ ಸಂಬಂಧ ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



