ರಸ್ತೆ ಅಪಘಾತದಲ್ಲಿ ಒಂದೇ‌ ಕುಟುಂಬದ ಮೂವರು ಸಾವು!

0
Spread the love

ಹುಬ್ಬಳ್ಳಿ:– ರಸ್ತೆ ಅಪಘಾತದಲ್ಲಿ ಒಂದೇ‌ ಕುಟುಂಬದ ಮೂವರು ಮೃತಪಟ್ಟಿದ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೆಸೂರು ಬಳಿ ಜರುಗಿದೆ.

Advertisement

ಮೃತರನ್ನು ಕೊಪ್ಪಳ ತಾಲೂಕಿನ ಮಂಗಳಾಪೂರ ಗ್ರಾಮದ 36 ವರ್ಷದ ಮುಸ್ತಫಾ, 6 ವರ್ಷದ ಶೋಹೆಬ್, ಜಾಫರ್ ಸಾಬ್ (60)ಮೃತ ದುರ್ದೈವಿಗಳು. ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೂವರನ್ನು ಧಾರವಾಡದ ‌ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಜಾಪರಸಾಬ್ ಓಮಿನ್ ಕಾರಿನಲ್ಲಿ ಕುಟುಂಬದವರ ಜೊತೆ ಶುಕ್ರವಾರ ಪಾರ್ಶವಾಯು ಔಷಧಿ ತರಲು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಲಗಾ ಗ್ರಾಮದಲ್ಲಿನ ಸೇಂಟ್ ಮೇರಿ ಆಸ್ಪತ್ರೆಗೆ ಹೋಗಿದ್ದರು.

ಔಷಧಿ ಪಡೆದು ಮರಳಿ ಊರಿಗೆ ಹೋಗುತ್ತಿದ್ದ ವೇಳೆ ರಾತ್ರಿ 10 ಗಂಟೆ ಸಮಾರಿಗೆ ಲಾರಿ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡವರನ್ನು ಧಾರವಾಡದ ‌ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love

LEAVE A REPLY

Please enter your comment!
Please enter your name here