ಗದಗ:-ಹೆರಿಗೆ ನೋವು ಹೆಚ್ಚಾಗಿದ್ದರಿಂದ 108 ಆಂಬ್ಯುಲೆನ್ಸ್ನಲ್ಲಿಯೇ ಮಹಿಳೆಯೊರ್ವರಿಗೆ ಹೆರಿಗೆ ಆದ ಘಟನೆ ಗದಗ್ ನಲ್ಲಿ ಜರುಗಿದೆ.
Advertisement
ಆ್ಯಂಬುಲೆನ್ಸ್ ನಲ್ಲಿಯೇ 108 ಸಿಬ್ಬಂದಿಗಳು ಹೆರಿಗೆ ಮಾಡಿಸಿದ್ದಾರೆ. ಗದಗ ನಗರದ DMM ಹೆರಿಗೆ ಆಸ್ಪತ್ರೆಯಿಂದ ಜಿಮ್ಸ್ ಆಸ್ಪತ್ರೆಗೆ ರವಾನಿಸುವ ವೇಳೆ ದಾರಿ ಮಧ್ಯದಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕೂಡಲೇ 108 EMT ಸಿಬ್ಬಂದಿ ರವಿ ಬಡಿಗೇರ್, ಚಾಲಕ ಸಂತೋಷ ದೇಸಾಯಿ ಹೆರಿಗೆ ಮಾಡಿಸಿದ್ದಾರೆ.
ಫಕ್ಕೀರಮ್ಮ ಎಂಬ ಮಹಿಳೆ ಆಂಬ್ಯುಲೆನ್ಸ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ ಎನ್ನಲಾಗಿದೆ. ತಾಯಿ ಮಗು ಇಬ್ಬರು ಸುರಕ್ಷಿತವಾಗಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 108 ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.