ಬೆಂಗಳೂರು: ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಎಲ್ಲಾ ಶಾಸಕರು, ಮಂತ್ರಿಮಂಡಲ ಮತ್ತು ಹೈಕಮಾಂಡ್ ಸಿಎಂ ಬೆಂಬಲಕ್ಕೆ ಇದ್ದಾರೆ ಎಂದು ಸಚಿವ ಹೆಚ್.ಸಿ.ಮಹಾದೇವಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಎಲ್ಲಾ ಶಾಸಕರು, ಮಂತ್ರಿಮಂಡಲ ಮತ್ತು ಹೈಕಮಾಂಡ್ ಸಿಎಂ ಬೆಂಬಲಕ್ಕೆ ಇದ್ದಾರೆ. ಸಿಎಂ ಆರೋಗ್ಯಕರವಾಗಿದ್ದಾರೆ.
Advertisement
ನಿತ್ಯ ಕೆಲಸ ಮಾಡುತ್ತಿರುವ ಅವರಿಗೆ ಆಯಾಸವಾಗುವುದಿಲ್ಲ. ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್ ಮತ್ತು ಸುರ್ಜೇವಾಲ ಸಮ್ಮುಖದಲ್ಲೇ ನಾಯಕತ್ವದ ಬದಲಾವಣೆ ಇಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಹಾಗೂ ನನ್ನ ಸಿದ್ಧಾಂತ ಒಂದೇ. ಇವತ್ತೋ ನಿನ್ನೆಯೋ ನಾನು ಅವರ ಪರವಾಗಿ ನಿಂತಿಲ್ಲ. ಬಹಳ ವರ್ಷಗಳಿಂದ ಅವರ ಪರವಾಗಿದ್ದೇನೆ. ಜೆಡಿಎಸ್, ಬಿಜೆಪಿ ಷಡ್ಯಂತ್ರ ಭಗ್ನಗೊಳಿಸಲು ಒಗ್ಗಟ್ಟಾಗಿ ನಿಂತಿದ್ದೇವೆ ಎಂದು ದೋಸ್ತಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.