ಬೆಂಗಳೂರಿನಲ್ಲಿ ಧರೆಗುರುಳಿದ ಬೃಹದಾಕಾರದ ಮರ: ವಾಹನಗಳು ಜಖಂ!

0
Spread the love

ಬೆಂಗಳೂರು:- ಸುಮಾರು 70 ವರ್ಷದ ಬೃಹದಾಕಾರದ ಮರ ಧರೆಗುರುಳಿದ ಘಟನೆ ರಾಜಧಾನಿ ಬೆಂಗಳೂರಲ್ಲಿ ಜರುಗಿದೆ. ಮರ ಏಕಾಏಕಿ ಬಿದ್ದ ಪರಿಣಾಮ ವಾಹನಗಳು ಜಖಂ ಆಗಿದೆ.

Advertisement

ಒಂದು ಒಮ್ನಿ ಕಾರು, ಒಂದು ಆಟೋ ಹಾಗೂ ನಾಲ್ಕು ಬೈಕ್ ಜಖಂ ಆಗಿದೆ. ವೈಯ್ಯಾಲಿಕಾವಲ್ ನ ಎ.ಎನ್ ಬ್ಲಾಕ್ ನಲ್ಲಿ ಘಟನೆ ಜರುಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ. ಸಂಜೆ 6:15 ರ ಸುಮಾರಿಗೆ ನಡೆದಿರುವ ಘಟನೆ ಜರುಗಿದೆ.

ಮರ ಬಿದ್ದ ಕೂಡಲೇ ಸ್ಥಳಕ್ಕಾಗಮಿಸಿ ಮರವನ್ನು ಬಿಬಿಎಂಪಿ ಅರಣ್ಯಾಧಿಕಾರಿಗಳು ತೆರವು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here