ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಕಳೆದ 19 ವರ್ಷಗಳಿಂದ ಜಿಲ್ಲೆಯಾದ್ಯಂತ ಉತ್ತಮ ಸಂಘಟನೆಯ ಮೂಲಕ ನಾಡು, ನುಡಿ, ಜಲ, ಭಾಷೆಗೆ ಧಕ್ಕೆ ಬಂದ ಸಂದರ್ಭದಲ್ಲಿ ನಿರಂತರ ಹೋರಾಟವನ್ನು ಮಾಡುತ್ತಾ ಬರಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಶರಣು ಗೋಡಿ ಹೇಳಿದರು.
ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶಿರಹಟ್ಟಿ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.
ರಾಜ್ಯಾಧ್ಯಕ್ಷ ನಿಂಗರಾಜ ಗೌಡ್ರು ನೇತೃತ್ವದಲ್ಲಿ ಜಿಲ್ಲೆಯಲ್ಲಿ ಇನ್ನಷ್ಟು ಶಕ್ತಿಯುತವಾಗಿ ಸಂಘಟನೆಯನ್ನು ಮಾಡಲು ಜಿಲ್ಲೆಯಾದ್ಯಂತ ತಾಲೂಕಿನಲ್ಲಿ ನೂತನವಾಗಿ ಪದಾಧಿಕಾರಿಗಳ ಆಯ್ಕೆ ಮಾಡಲಾಗುತ್ತಿದೆ ಎಂದರು.
ಸೇನೆಯ ತಾಲೂಕಾಧ್ಯಕ್ಷರಾಗಿ ವಿರೇಶ ಪಸಾರದ, ಉಪಾಧ್ಯಕ್ಷರಾಗಿ ಮಂಜುನಾಥ ದೇಸಳ್ಳಿ, ರೈತ ಘಟಕದ ಅಧ್ಯಕ್ಷರಾಗಿ ಇಸ್ಮಾಯಿಲ್ ಢಾಲಾಯತ, ಉಪಾಧ್ಯಕ್ಷರಾಗಿ ಆನಂದ ಕಾರಕಟ್ಟಿ, ತಾಲೂಕಾ ಕಾರ್ಯಾಧ್ಯಕ್ಷರಾಗಿ ದೇವರಾಜ ಶಿಂಧೆ, ಉಪಾಧ್ಯಕ್ಷರಾಗಿ ಸಲ್ಮಾನ ಕುಂದರ, ಸ.ಕಾರ್ಯದರ್ಶಿಯಾಗಿ ನೂರಅಹ್ಮದ ಮುಳಗುಂದ, ಬೆಳ್ಳಟ್ಟಿ ಗ್ರಾಮ ಘಟಕದ ಅಧ್ಯಕ್ಷರಾಗಿ ಸುಹೇಲ್ ನದಾಫ್, ಉಪಾಧ್ಯಕ್ಷರಾಗಿ ರಾಜು ಶಿರಹಟ್ಟಿ ಇವರುಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಆಡೂರ, ಉಪಾಧ್ಯಕ್ಷ ಅಜಯ ಕಂಬಳಿ, ದೇವಪ್ಪ ಶಿಂಧೆ, ಇಸ್ಮಾಯಲ್ ಢಾಲಾಯತ, ನೂರುಲ್ಲಾ ಮಕಾನದಾರ, ನೂರಅಹ್ಮದ ಮುಳಗುಂದ, ಸಂಜೀವ ಪೋತರಾಜ ಮುಂತಾದವರು ಉಪಸ್ಥಿತರಿದ್ದರು.