ವಿಜಯಸಾಕ್ಷಿ ಸುದ್ದಿ, ನರೇಗಲ್ : ದಿನಕ್ಕೊಂದು ಬಗೆಯ ಸಿಹಿಯನ್ನು ಸವಿಯುವ ಅವಕಾಶ ಇಲ್ಲಿನ ಕೆಜಿಎಸ್ ಶಾಲೆಯ ಮಕ್ಕಳಿಗೆ ಪ್ರತಿ ಶ್ರಾವಣದಲ್ಲಿ ದೊರಕುತ್ತದೆ. ಈ ಸವಿ ಅಮೃತ ಭೋಜನದ ವೆಚ್ಚವನ್ನು ಪ್ರತಿ ದಿನ ಒಬ್ಬ ದಾನಿಗಳು ವಹಿಸಿಕೊಂಡು ಮಕ್ಕಳಿಗೆ, ಸಿಬ್ಬಂದಿಗೆ ಸಿಹಿಯೂಟದ ಅಮೃತ ಭೋಜನ ಮಾಡಿಸಿ ಸಂತೋಷ ಪಡುತ್ತಿದ್ದಾರೆ.
ಸೋಮವಾರದ ಅಮೃತ ಭೋಜನದ ಸೇವೆಯನ್ನು ಎಂಸಿಎಸ್ ಗೆಳೆಯರ ಬಳಗ ಹಾಗೂ ರಾಗಿ ಸಿದ್ದಪ್ಪನವರ ಕುಟುಂಬದವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಬಿ.ಬಿ. ಕುರಿ, ಶ್ರಾವಣ ಮಾಸದ ನಿಮಿತ್ತ ಅಮೃತ ಭೋಜನವನ್ನು ಪ್ರತಿದಿನ ಮಕ್ಕಳಿಗೆ ಮಾಡಿಸಲು ನನ್ನ ಮನಸ್ಸಿನಲ್ಲಿ ಬಂದಿದ್ದು, ಎಲ್ಲರಲ್ಲಿ ಚರ್ಚಿಸಿ ಅಮೃತ ಭೋಜನ ಯೋಜನೆ ಆರಂಭಿಸಲಾಯಿತು. ಗ್ರಾಮದ ದಾನಿಗಳು ಪ್ರತಿನಿತ್ಯದ ಊಟದ ಖರ್ಚನ್ನು ಭರಿಸಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು ಎಂದರು.
ಎಂಸಿಎಸ್ ಗೆಳೆಯರ ಬಳಗದ ಹಾಗೂ ಸಿದ್ದಪ್ಪ ರಾಗಿ ಕುಟುಂಬದವರಿಗೆ ಶಾಲೆಯ ವತಿಯಿಂದ ಸನ್ಮಾನ ಜರುಗಿತು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಕೊಟಗಿ, ಎಂ.ಎಸ್. ಮಾಳಶೆಟ್ಟಿ, ಎಸ್.ಎಚ್. ಹಾದಿಮನಿ, ಎನ್.ವಿ. ಚೌವಾಣ, ಎಂ.ಪಿ. ಅಣಗೌಡ್ರ, ಜೆ.ಎ. ಪಾಟೀಲ, ಡಿ.ವಿ. ಕಳ್ಳಿ, ಎಸ್.ಐ. ಜಾಗಾಪೂರ, ರಾಜೇಶ್ವರಿ ತೊಂಡಿಹಾಳ, ಎಚ್.ಎಫ್. ಕಡ್ಲಿಮಟ್ಟಿ, ಬಿ.ಡಿ. ಹಳ್ಳದಮನಿ ಸೇರಿದಂತೆ ಇತತರಿದ್ದರು.



