ವಿಶೇಷ ಜಾಗೃತಿ ಜಾಥಾದಿಂದ ಜನರಲ್ಲಿ ಜಾಗೃತಿ

0
Special awareness jatha of various schemes of central government
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಮಂಗಳವಾರ ಕೇಂದ್ರ ಸಂವಹನ ಇಲಾಖೆ, ತಾಲೂಕ ಆಡಳಿತ, ತಾ.ಪಂ ಶಿಶು ಅಭಿವೃದ್ದಿ ಯೋಜನೆ, ಆರೋಗ್ಯ, ಕೃಷಿ, ತೋಟಗಾರಿಕೆ, ಪೊಲೀಸ್, ಶಿಕ್ಷಣ ಇಲಾಖೆ, ಪುರಸಭೆ ಹಾಗೂ ವಿವಿಧ ಶಾಲಾ-ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳು, ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ, ವಿಕಸಿತ ಭಾರತ ಬಜೆಟ್, ದೂರದೃಷ್ಟಿ-2047, ಏಕ್ ಭಾರತ ಶ್ರೇಷ್ಠ ಭಾರತ ಹಾಗೂ ಕೇಂದ್ರ ಸರಕಾರದ ವಿವಿಧ ಯೋಜನೆಗಳ ವಿಶೇಷ ಜಾಗೃತಿ ಜಾಥಾಕ್ಕೆ ಪಿಎಸ್‌ಐ ಈರಪ್ಪ ರಿತ್ತಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

Advertisement

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆಯನ್ನು ಕ್ಷೇತ್ರ ಪ್ರಚಾರಕ ಜಿ.ತುಕಾರಾಮಗೌಡ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರದ ಕಾನೂನು ಹಾಗೂ ಯೋಜನೆಗಳ ಅರಿವು ಮೂಡಿಸಲು ಈ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದರು.

ಶಿರಸ್ತೇದಾರ ಮನಿಯಾರ್ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಸರ್ಕಾರದ ಯೋಜನೆಗಳು ಹಾಗೂ ರೂಪಿಸಿರುವ ಕಾನೂನುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್.ಬಿ. ಸಣ್ಣಮನಿ ವಹಿಸಿದ್ದರು. ಈಶ್ವರ್ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಂ.ಸಿ. ಬಣಗಾರ, ಬಿ.ಬಿ. ದನದಮನಿ, ಆರ್.ಬಿ. ಜೋಶಿ ನಿರ್ಣಾಯಕರಾಗಿದ್ದರು. ಸತೀಶ್ ಬೋಮಲೆ ಸ್ವಾಗತಿಸಿದರು, ಉಮೇಶ್ ನೇಕಾರ ನಿರೂಪಿಸಿದರು. ಎಸ್.ಎನ್. ತಾಯಮ್ಮನವರ ವಂದಿಸಿದರು.

ಕಾರ್ಯಕ್ರಮದಲ್ಲಿ ಮುರಳೀಧರ ಕಾರಭಾರಿ ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

ವಿವಿಧ ಶಾಲೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರ ಪ್ರಚಾರಕರಾದ ಜಿ.ತುಕಾರಾಮಗೌಡ ಹಾಗೂ ಶಿರಸ್ತೇದಾರ ಮನಿಯಾರ ಮುರುಳೀಧರ ಕಾರಭಾರಿ, ಬಿಆರ್‌ಪಿ.ಈಶ್ವರ ಮೆಡ್ಲೇರಿ, ಬಿ.ಎಂ.ಕುಂಬಾರ, ಎಸ್.ಎಸ್.ಜೀರಂಕಳ್ಳಿ, ಡಿ.ಎನ್.ದೊಡ್ಡಮನಿ, ಆಯ್.ಬಿ.ಜಕ್ಕನಗೌಡ್ರ ಸಿ.ಆರ್.ಪಿ.ಗಳಾದ ಸತೀಶ ಬೋಮಲೆ, ಉಮೇಶ ನೇಕಾರ ಹಾಜರಿದ್ದರು.

ಸ್ಪರ್ಧಾ ವಿಜೇತರು

ಭಾಷಣ ಸ್ಪರ್ಧೆ: ಶ್ರಾವ್ಯ ಹಿರೇಮಠ-ಆಕ್ಸ್ಫರ್ಡ್ ಶಾಲೆ(ಪ್ರಥಮ), ರೇಖಾ ಬಾಕಳೆ-ಸರ್ಕಾರಿ ಪ್ರೌಢಶಾಲೆ (ದ್ವಿತೀಯ), ವಿನುತಾ ಘೋರ್ಪಡೆ-ದಿ ಯೂನಿಕ್ ಶಾಲೆ(ತೃತೀಯ).
ಚಿತ್ರಕಲಾಸ್ಪರ್ಧೆ: ಉಮೇಶ್ ಪೂಜಾರ್- ಮೊರಾರ್ಜಿ ವಸತಿ ಶಾಲೆ, ಒಡೆಯರ ಮಲ್ಲಾಪುರ(ಪ್ರಥಮ), ಖದೀಜಾ ಸೂರಣಗಿ-ಎಸ್‌ಟಿಪಿಎಂಬಿ ಆಂಗ್ಲ ಮಾಧ್ಯಮ ಶಾಲೆ(ದ್ವಿತೀಯ), ಅಲ್ಫಿಯಾ ಮರ್ದಾನಿ-ದೂದಪಿರಾಂ ಸರ್ಕಾರಿ ಉರ್ದು ಪ್ರೌಢಶಾಲೆ (ತೃತೀಯ)
ಆ.28ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಸಭಾಂಗಣದಲ್ಲಿ ನಡೆಯುವ ಕೇಂದ್ರ ಸರ್ಕಾರದ ಯೋಜನೆಗಳ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.


Spread the love

LEAVE A REPLY

Please enter your comment!
Please enter your name here