ಬೆಂಗಳೂರು: ಮುಡಾ ಹಗರಣದ ಆರೋಪದಲ್ಲಿ ಸಿದ್ದರಾಮಯ್ಯ ಅವರು ಭಾಗಿಯಾಗಿರುವ ಕುರಿತು ಯಾವುದೇ ಪುರಾವೆಗಳಿಲ್ಲ, ಸಹಿಯಿಲ್ಲ, ಅವರ ಆದೇಶವಿಲ್ಲ, ನೊಂದಣಿಯಲ್ಲಿ ಸಹ ಅವರ ಹೆಸರಿಲ್ಲ. ಆದ್ದರಿಂದ ಪ್ರಾಸಿಕ್ಯೂಷನ್ ಅನುಮತಿ ವಿಚಾರದಲ್ಲಿ ನಾಳೆ ನ್ಯಾಯಾಲಯ ಇದನ್ನು ಪರಿಗಣಿಸುವುದಿಲ್ಲ ಎಂದು ಕೊಂಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ನಡೆಯ ಕುರಿತು ನಾವು ಚರ್ಚಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಪ್ರತಿಭಟನೆಯ ನಂತರ ಅಥವಾ ಅದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಶಾಸಕರು, ಪರಿಷತ್ತಿನ ಸದಸ್ಯರು, ಸಂಸದರು ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ. ಪ್ರತಿಭಟನೆಗೆ ಮಣಿಯುವುದು ಬಿಡುವುದು ನಂತರದ ವಿಚಾರ. ‘ಆದರೆ, ಶಾಸಕರೆಲ್ಲಾ ಬಂದು ಹೇಳಿದ್ದರೆ ನಿರ್ಧಾರ ಮಾಡುತ್ತಿದ್ದೆ’ ಎಂದು ನಾಳೆಯ ದಿವಸ ಹೇಳಬಹುದು. ಆದ್ದರಿಂದ ಆ ಪ್ರಯತ್ನವನ್ನೂ ಸಹ ಮಾಡಲಿದ್ದೇವೆ ಎಂದರು.