ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಆ.31 ಕ್ಕೆ A1 ಆರೋಪಿ ಪವಿತ್ರಾಗೌಡ ಜಾಮೀನು ಅರ್ಜಿಯ ಭವಿಷ್ಯ ನಿರ್ಧಾರವಾಗಲಿದೆ.
ಇಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಗೌಡ ಸೇರಿದಂತೆ ನಾಲ್ವರು ಆರೋಪಿಗಳು ಕೋರ್ಟ್ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಸುಧೀರ್ಘವಾದ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆಗಸ್ಟ್ 31ಕ್ಕೆ ಆದೇಶ ಕಾಯ್ದಿರಿಸಿದೆ.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಬಂಧನವಾಗಿದ್ದ ಆರೋಪಿಗಳಾದ ಪವಿತ್ರಗೌಡ, ವಿನಯ್, ಕೇಶವಮೂರ್ತಿ ಹಾಗೂ ಅನುಕುಮಾರ್ ಜಾಮೀನು ಕೋರಿ ಸೆಷನ್ಸ್ ಕೋರ್ಟ್ಗೆ ಅರ್ಜಿ ಹಾಕಿದ್ದರು.
ನಿನ್ನೆ ಆರೋಪಿಗಳ ಪರ ವಕೀಲರು ವಾದ ನಡೆಸಿದ್ದು, ಪವಿತ್ರಾಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡನೆ ಮಾಡಿದ್ರು. ಇಂದು ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದರು.
ಸುಮಾರು ಒಂದು ಗಂಟೆಯ ಕಾಲ ವಾದ ಮಂಡಿಸಿದ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಕಿಡ್ನಾಪ್ನಿಂದ ಹಿಡಿದು ಕೊಲೆಯ ಆಗಿ ಸಾಕ್ಷ್ಯನಾಶದ ಬಗ್ಗೆ ಇಂಚಿಂಚೂ ಮಾಹಿತಿ ಕೋರ್ಟ್ಗೆ ನೀಡಿದ್ದು, ಯಾವುದೇ ಕಾರಣಕ್ಕೂ ಜಾಮೀನು ಕೊಡದಂತೆ ಮನವಿ ಮಾಡಿ ವಾದ ಮುಕ್ತಾಯ ಮಾಡಿದರು.
ಎರಡೂ ಕಡೆ ವಾದ-ಪ್ರತಿವಾದ ಮುಕ್ತಾಯ ಆಗಿದ್ದು, ಆಗಸ್ಟ್ 31 ಕ್ಕೆ ಪವಿತ್ರಗೌಡ ಹಾಗೂ ಅನುಕುಮಾರ್ ಅರ್ಜಿಯ ಆದೇಶ ಕಾಯ್ದಿರಿಸಿದರೆ, ಸೆ.2ಕ್ಕೆ ವಿನಯ್ ಹಾಗೂ ಕೇಶವಮೂರ್ತಿ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿತು.