ವಿಜಯಸಾಕ್ಷಿ ಸುದ್ದಿ, ಗದಗ : ಬೆಟಗೇರಿಯ ಉಸಗಿನಗಟ್ಟಿ ಓಣಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸದ್ಭಕ್ತರು ಇತ್ತೀಚೆಗೆ ಶ್ರೀ ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡರು. ಸುಮಾರು 15 ವರ್ಷಗಳಿಂದ ಪಾದಯಾತ್ರೆಯನ್ನು ಮಾಡುತ್ತಿದ್ದು, ಶ್ರೀ ಮುತ್ತು ಹರಪನಹಳ್ಳಿ ಇವರ ನೇತೃತ್ವದಲ್ಲಿ ಪಾದಯಾತ್ರೆಯನ್ನು ಕೈಗೊಳ್ಳಲಾಗಿತ್ತು.
Advertisement
ಪಾದಯಾತ್ರೆಯಲ್ಲಿ ಕುಮಾರ ಪಲ್ಲೇದ, ಗಣೇಶ ಹರಪನಹಳ್ಳಿ, ರಾಕೇಶ ಅಣ್ಣಿಗೇರಿ, ವೀರೇಶ ಅಣ್ಣಿಗೇರಿ, ಪ್ರವೀಣ ಅಣ್ಣಿಗೇರಿ, ನವೀನ ಹರಪನಹಳ್ಳಿ, ಗವಿಸಿದ್ಧೇಶ್ವರ ಕನ್ಯಾಳಮಠ, ಕೊಟ್ರೇಶ ದುಂಡಿ, ಶಿವಕುಮಾರ ಕೊಂಡಿಕೊಪ್ಪ, ಅಮಿತ ಹರಪನಹಳ್ಳಿ ಮುಂತಾದವರು ಪಾಲ್ಗೊಂಡಿದ್ದರು.