ಧರ್ಮ, ಸಂಸ್ಕೃತಿ ಮರೆಯದಿರಿ : ರಾಜು ಖಾನಪ್ಪನವರ

0
Raju Khanappa's call to celebrate Ganesha festival ritually
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಅಂದು ಸ್ವಾತಂತ್ರೋತ್ಸವಕ್ಕಾಗಿ ಜನರನ್ನು ಸಂಘಟನೆ ಮಾಡುವ ಉದ್ದೇಶದಿಂದ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಪ್ರಾರಂಭಿಸಿದರು.

Advertisement

ಇಂದು ಧರ್ಮ ಜಾಗೃತಿಗಾಗಿ ಗಣೇಶೋತ್ಸವವನ್ನು ಆಚರಿಸುವ ಸಂಪ್ರದಾಯ ಬೆಳೆದು ಬರಬೇಕಾಗಿದೆ ಎಂದು ಗದಗ ಜಿಲ್ಲಾ ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ಮಾರ್ಗದರ್ಶಕ ಹಾಗೂ ಶ್ರೀರಾಮಸೇನಾ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಶಂಕರ ಭಾರತಿ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ಲಕ್ಷ್ಮೇಶ್ವರದ ಸಮಿತಿ ರಚನೆ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು.

ಬಾಲಗಂಗಾಧರ ತಿಲಕ್ ಅವರಿಗೆ ಈ ಗಣೇಶನ ಹಬ್ಬವನ್ನೇ ಸ್ವಾತಂತ್ರ ಸಂಗ್ರಾಮದ ಹೋರಾಟಕ್ಕೆ ಬಳಸಿಕೊಳ್ಳುವ ಪರಿಕಲ್ಪನೆ ಬಂದು ದೇಶದ ಎಲ್ಲ ಜನರನ್ನು ಒಂದೇ ವೇದಿಕೆಯಡಿ ತರಲು ಸಾರ್ವಜನಿಕವಾಗಿ ಪ್ರತಿಷ್ಟಾಪಿಸುವ ಹೊಸ ಪರಂಪರೆಯನ್ನು ಆರಂಭಿಸಿದರು. ಆದರೆ ಇಂದಿನ ದಿನಗಳಲ್ಲಿ ಅದು ಸರಿಯಾದ ಮಾರ್ಗದಲ್ಲಿ ಸಾಗುವದು ಅವಶ್ಯವಾಗಿದೆ. ಗಣೇಶನ ಸ್ಥಾಪನೆಯ ಉದ್ದೇಶವನ್ನು ಅರಿತುಕೊಂಡು ಹಬ್ಬದ ದಿನದಿಂದ ಬರುವ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸುವ ಮಹಾಕಾರ್ಯವನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಗಣೇಶೋತ್ಸವದ ಮಂಡಳಿಗಳನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಪಟ್ಟಣದಲ್ಲಿ ಮಹಾಮಂಡಳಿ ಮಾಡಬೇಕೆನ್ನು ಉದ್ದೇಶವನ್ನು ಹೊಂದಲಾಗಿರುವದು ಉತ್ತಮ ಬೆಳವಣಿಗೆಯಾಗಿದ್ದು, ಒಂದೇ ದಿನ ಎಲ್ಲ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ಎಲ್ಲರೂ ನಾಂದಿ ಹಾಡಬೇಕಾಗಿದೆ. ವೇದಿಕೆಗಳಲ್ಲಿ ಅಶ್ಲೀಲ ಹಾಡು, ನೃತ್ಯಗಳನ್ನು ಇಟ್ಟುಕೊಳ್ಳದೆ ಭಕ್ತಿ, ಜಾನಪದ, ಸ್ವಾತಂತ್ರ್ಯ ಹೋರಾಟಗಾರ ಗೀತೆಗಳು, ಪ್ರಬಂಧಗಳು, ರಂಗೋಲಿ ಸ್ಪರ್ಧೆಗಳನ್ನು ಸಂಘಟಿಸಿ. ಮಂತ್ರಘೋಷಗಳು ಮೊಳಗಲಿ, ಮಣ್ಣಿನಿಂದಲೇ ತಯಾರಾದ ಗಣೇಶನ ಮೂರ್ತಿಗಳನ್ನು ಸ್ಥಾಪಿಸಿ ಎಂದು ಕರೆನೀಡಿದರು.

ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಸುರೇಶ ನಂದೆಣ್ಣವರ ಹಾಗೂ ಯುವ ಮುಖಂಡರುಗಳಾದ ಮಂಜುನಾಥ ಹೊಗೆಸೊಪ್ಪಿನ, ಬಸವರಾಜ ಹಿರೇಮನಿ, ಬಸವರಾಜ ಚಕ್ರಸಾಲಿ, ಗಂಗಾಧರ ಮೆಣಸಿನಕಾಯಿ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ಗದಗ ತಾಲೂಕಾಧ್ಯಕ್ಷ ಭರತ ಲದ್ದಿ, ನಗರ ಬಿಜೆಪಿ ಅಧ್ಯಕ್ಷ ನವೀನ ಬೆಳ್ಳಟ್ಟಿ, ವಿಜಯ ಕುಂಬಾರ, ಮೋಹನ ನಂದೆಣ್ಣವರ, ಲೋಕೇಶ ಸುತಾರ, ಭರಮಪ್ಪ ಶೆರಸೂರಿ ವೇದಿಕೆ ಮೇಲೆ ಇದ್ದರು.

ಅಮಿತ ಗುಡಗೇರಿ, ಪ್ರಾಣೇಶ ವ್ಯಾಪಾರಿ, ಮುತ್ತು ಕರ್ಜೇಕಣ್ಣವರ, ಕಿರಣ ಚಿಲ್ಲೂರಮಠ, ಮಲ್ಲನಗೌಡ ಪಾಟೀಲ್, ಚಿನ್ನು ಹಾಳದೋಟದ, ಅಭಿಷೇಕ ಸಾತಪುತೆ, ಅನಿಲ ಮುಳಾಳ, ಮುರಗೇಂದ್ರಸ್ವಾಮಿ ಹಿರೇಮಠ, ಗಂಗಾಧರ ಕರ್ಜಕಣ್ಣವರ, ಅನೇಕ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ವಿವಿಧ ಗಣೇಶ ಮಂಡಳದ ಸದಸ್ಯರು ಸೇರಿದಂತೆ ನೂರಾರು ಜನರು ಹಾಜರಿದ್ದರು.

ಶ್ರೀರಾಮ ಸೇನಾ ತಾಲೂಕಾ ಸಂಚಾಲಕ ಈರಣ್ಣ ಪೂಜಾರ ಮಾತನಾಡಿ, ಹಿಂದೂ ಧರ್ಮದಲ್ಲಿ ಶಿಸ್ತು-ಸಮಯ ಪ್ರಜ್ಞೆ ಬರಲಿ. ಎಲ್ಲರೂ ಒಗ್ಗಟ್ಟಿನಿಂದ ಹಬ್ಬವನ್ನು ಆಚರಣೆ ಮಾಡುವ ಸಲುವಾಗಿ ಗಜಾನನೋತ್ಸವ ಮಹಾಮಂಡಳಿಯು ಉದ್ದೇಶ ಹೊಂದಿದ್ದು ಒಗ್ಗಟ್ಟು ಪ್ರದರ್ಶನ ಮಾಡೋಣ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here