ಬೆಳಗಾವಿ: ಪ್ರವಾಸಕ್ಕೆಂದು ದುಬೈನ ಓಮಾನ್ʼಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಕುಟುಂಬ ರಸ್ತೆ ಅಪಘಾತದಲ್ಲಿ ಮೃತಪಟ್ಟಿದೆ. ಪವನ್‌ಕುಮಾರ್ ತಹಸೀಲ್ದಾರ, ಪೂಜಾ ತಹಸೀಲ್ದಾರ, ವಿಜಯಾ ತಹಸೀಲ್ದಾರ, ಅದಿಶೇಷ ಬಸವರಾಜ್ ಮೃತರಾಗಿದ್ದು, ಓಮಾನ್ ನಗರದ ಸಲಾಲಾ ನಗರದಿಂದ ಮುಸ್ಕತ್‌ಗೆ ತೆರಳುವಾಗ ಹೈಮಾ ಎಂಬ ಪ್ರದೇಶದಲ್ಲಿ ಕಾರ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿವೆ.
ಇದರಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ನಾಲ್ವರು ಸಜೀವ ದಹನವಾಗಿದ್ದಾರೆ. ಮೃತರ ಶವಗಳನ್ನು ಭಾರತಕ್ಕೆ ತರಲು ಅನುಕೂಲ ಮಾಡುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಮಾಡಿದ್ದಾರೆ.



