ವಿಜಯಸಾಕ್ಷಿ ಸುದ್ದಿ, ಡಂಬಳ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅತಂತ್ರ ಸ್ಥಿತಿಯಲ್ಲಿದೆ. ವಾಲ್ಮೀಕಿ ಹಗರಣದಂತಹ ಭ್ರಷ್ಟಚಾರದಲ್ಲಿ ಮುಳಗಿದೆ ಎಂದು ಮಾಜಿ ಶಾಸಕ ಕಳಕಪ್ಪ ಬಂಡಿ ಆರೋಪಿಸಿದರು.
ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಕಲಾಭವನದಲ್ಲಿ ಭಾರತಿಯ ಜನತಾ ಪಕ್ಷದಿಂದ ಗದಗ ಜಿಲ್ಲಾ ಡಂಬಳ ಮಂಡಳದ ಸದಸ್ಯತ್ವ ಅಭಿಯಾನದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೀನದಯಾಳ ಶರ್ಮಾ, ಶ್ಯಾಮ ಪ್ರಸಾದ ಅವರ ದೂರದೃಷ್ಟಿಯಡಿ ಒಂದು ಹಿಂದೂಗಳ ಪಕ್ಷ ಕಟ್ಟಬೇಕು ಎಂಬ ಅವರ ಶ್ರಮದ ಪ್ರತೀಕವಾಗಿ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕೆಲಸಗಳಿಂದಾಗಿ ಬಿಜೆಪಿ ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷವಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ಹೇಳಿದರು.
ಸದಸ್ಯತ್ವ ಅಭಿಯಾನಕ್ಕೆ ಸೆ.1ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಸೆ.2ರಿಂದ 15ದಿನಗಳ ಕಾಲ ಸದಸ್ಯತ್ವ ಅಭಿಯಾನ ಜರುಗಲಿದೆ. ಕಳೆದ ಬಾರಿಯಂತೆಯೇ ಜಿಲ್ಲೆಯಲ್ಲಿ ಅತ್ಯಧಿಕ ಸದಸ್ಯತ್ವ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಮಂಡಲ ಹಾಗೂ ಎಲ್ಲ ಮೋರ್ಚಾಗಳ ಕಾರ್ಯ ಯೋಜನೆ ಹಾಕಿಕೊಳ್ಳಬೇಕು. ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಸದಸ್ಯತ್ವ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ, ಪಕ್ಷ ಗಟ್ಟಿಯಾಗಬೇಕೆಂದರೆ ಸಂಘಟನೆ ಅವಶ್ಯಕವಾಗಿದೆ. ಪ್ರತಿಯೊಬ್ಬರೂ ಸಕ್ರಿಯ ಸದಸ್ಯತ್ವವನ್ನು ಹೊಂದಬೇಕು. ವೈಯಕ್ತಿಕ ಕೆಲಸದ ನಡುವೆಯೂ ಬಿಡುವು ಮಾಡಿಕೊಂಡು ಪಕ್ಷ ಸಂಘಟನೆಗೆ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ ಉಪಾಧ್ಯಕ್ಷ ಬೀರಪ್ಪ ಬಂಡಿ, ನಿಂಗಪ್ಪ ಮಾದರ, ಎಸ್ಸಿ ಮೋರ್ಚಾ ಅಧ್ಯಕ್ಷ ಕೆ.ಡಿ. ಬಂಡಿ, ಶಶಿಧರ ದಿಂಡೂರು, ಡಿ. ಪ್ರಸಾದ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಶಿವಪ್ಪ ಅಂಕದ, ಎಲ್.ಎಂ. ಚವ್ಹಾಣ್, ಬಸವರಾಜ ಚೆನ್ನಳ್ಳಿ, ಮುಖಂಡ ಮಲ್ಲಪ್ಪ ಮಠದ, ಬಸಪ್ಪ ಕೊತಂಬ್ರಿ, ಚಂದ್ರು ಯಳಮಲಿ, ನಾಗರಾಜ ಕಾಟ್ರಹಳ್ಳಿ, ಭೀಮರಡ್ಡಿ ರಾಜೂರು, ಕಾರ್ಯಾದರ್ಶಿ ಬಸವರಾಜ ಸಂಗನಾಳ, ಪ್ರವೀಣ ವಡ್ಡಟ್ಟಿ, ವಿರೂಪಾಕ್ಷಿ ಯಲಿಗಾರ, ಪಂಚಾಕ್ಷರಿ ಹರ್ಲಾಪೂರಮಠ, ಮಲ್ಲಪ್ಪ ಮುದಗಣ್ಣವರ, ಜಗದೀಶ ತಳವಾರ ಸೇರಿದಂತೆ ಕಾರ್ಯಕರ್ತರು ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಂಬಳ ಬಿಜೆಪಿ ಮಂಡಲದ ಅಧ್ಯಕ್ಷ ರವಿ ಕರಿಗಾರ ಮಾತನಾಡಿ, ವಿಶ್ವವೇ ಮೆಚ್ಚುವ ನಮ್ಮ ಹೆಮ್ಮಯ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಮತ್ತು ಬಿಜೆಪಿ ಪಕ್ಷಕ್ಕೆ ಶಕ್ತಿ ತುಂಬಲು ನಾವೆಲ್ಲರೂ ಜತೆಗೂಡಿ ಶ್ರಮವಹಿಸಿ ಸದಸ್ಯತ್ವ ಅಭಿಯಾನ ಯಶ್ವಸಿಗೊಳಿಸಬೇಕು ಎಂದು ಹೇಳಿದರು.