ಶಿಕ್ಷಣಕ್ಕೆ ನೀಡಿದ ದಾನ ಶ್ರೇಷ್ಠ : ಆರ್.ಎಸ್. ಬುರಡಿ

0
The charity given to education is great
Spread the love

ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾದಾನ ಶ್ರೇಷ್ಠ, ವಿದ್ಯಾದಾನಕ್ಕೆ ನೀಡಿದ ದಾನಗಳು ಕೂಡಾ ಶ್ರೇಷ್ಠವೆಂದು ಗದಗ ಶಹರ ಬಿಇಓ ಆರ್.ಎಸ್. ಬುರಡಿ ಹೇಳಿದರು.

Advertisement

ಅವರು ನಗದರ ರಾಜೀವಗಾಂಧಿ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ನಂ4ಕ್ಕೆ ಅಲ್ಮೆರಾ, ಮೈಕ್ ಸೆಟ್, ಮಕ್ಕಳ ಕಲಿಕೆಗೆ ಖುರ್ಚಿ, ಟೇಬಲ್ ಹಾಗೂ ವಿವಿಧ ಸಾಮಗ್ರಿಗಳನ್ನು ದಾನಿಗಳಿಂದ ಸ್ವೀಕರಿಸಿ ಮಾತನಾಡಿದರು.

ಸರಕಾರಿ ಶಾಲೆ ಉತ್ತಮ ಗುಣಮಟ್ಟದ ಶಿಕ್ಷಕರನ್ನು ಹೊಂದಿದೆ. ಸರಕಾರ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಪೌಷ್ಠಿಕ ಆಹಾರ, ಉಚಿತ ಸಮವಸ್ತç ನೀಡುವ ಮೂಲಕ ಪ್ರತಿಯೊಬ್ಬರೂ ಶಿಕ್ಷಣ ಪಡೆಯುಬೇಕು ಎಂಬ ಉದ್ದೇಶ ಹೊಂದಿದೆ. ಸರಕಾರದೊಂದಿಗೆ ದಾನಿಗಳೂ ಸರಕಾರಿ ಶಾಲೆಗಳಿಗೆ ದಾನ ನೀಡುತ್ತಿರುವುದು ಅತ್ಯಂತ ಶ್ರೇಷ್ಠವಾದ ಕಾರ್ಯವಾಗಿದೆ ಎಂದರು.

ಗದಗ ಗ್ರಾಮೀಣ ಬಿಇಓ ವಿ.ವಿ. ನಡುವಿನಮನಿ ಮಾತನಾಡಿ, ಉರ್ದು ಭಾಷೆ ಅತ್ಯಂತ ಶ್ರೀಮಂತ ಬಾಷೆಯಾಗಿದೆ. ಇಂದು ಉರ್ದು ಬಾಷೆ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯ ಕೈಜೊಡಿಸುತ್ತಿರುವುದು ಶ್ಲಾಘನೀಯ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಅಮೀನಸಾಬ ಹುಡೆದಮನಿ, ಶಾಲಾ ಪ್ರಧಾನ ಗುರುಮಾತೆ ಖೈರುನಿಸಾ.ದಾವಲಾ, ಅಕ್ಷರದಾಸೋಹ ಅಧಿಕಾರಿ ಶಂಕರ ಹಡಗಲಿ, ಸಿಆರ್‌ಪಿ ಖಲೀಲ ಜಲಿಗೇರಿ, ಕವಿತಾ ದಂಡಿನ, ಶಿಲ್ಪಾ ಹಳ್ಳಿಕೇರಿ, ನಜಮಾ ಹುಡೆದಮನಿ, ಖವಾಸ, ನಶೀಮಾ ಜಕ್ಕಲಿ, ಹಲೀಮಾ ಶೇಖ, ಋಖುನಾ ಬಳ್ಳಾರಿ, ಹಸೀನಾ ಮಕಾಂದಾರ, ಇಮಾಮಸಾಬ ಗಾಡಗೋಳಿ ಇದ್ದರು.


Spread the love

LEAVE A REPLY

Please enter your comment!
Please enter your name here