ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಸಮಾಜದಲ್ಲಿ ಅಡಗಿರುವ ಮೌಢ್ಯತೆಯನ್ನು ತೊಳೆಯುವಲ್ಲಿ ವಚನ ಸಾಹಿತ್ಯವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ವಿಜಯನಗರ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ. ರವೀಂದ್ರನಾಥ ತಿಳಿಸಿದರು.
ಪಟ್ಟಣದ ಕಾಶಿಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ನಡೆದ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯದದ ಬಗೆಗೆ ಆಸಕ್ತಿ ಬರುವಂತೆ ಮಾಡುವುದು ವಚನಾಕಾರರ ಕರ್ತವ್ಯ. ಸಮಾಜದಲ್ಲಿ ಅಡಗಿರುವ ಸಮಸ್ಯೆಗಳನ್ನು ಸಾಹಿತ್ಯದ ರೂಪದಲ್ಲಿ ಪ್ರಚುರಪಡಿಸಿಬೇಕು. ವ್ಯಕ್ತಿಯ ಅಜ್ಞಾನವನ್ನು ಕಳಚುವ ಶಕ್ತಿ ಸಾಹಿತ್ಯಕ್ಕಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಎಸ್. ಶಿವಾನಂದ ಮಾತನಾಡಿ, ಆಹಾರವೊಂದು ಅದ್ಬುತ ಸಾಧನ. ಅದನ್ನು ದೇಹಕ್ಕೆ ಬೇಕಾದಷ್ಟು ಮಾತ್ರ ತೆಗೆದುಕೊಳ್ಳಬೇಕು. ಮನುಷ್ಯನಲ್ಲಿ ನಿರಹಂಕಾರದ ಭಾವನೆ ಬಂದಲ್ಲಿ ಬೆಳವಣಿಗೆ ಕುಂಠಿತವಾಗುತ್ತದೆ. ನಮ್ಮನ್ನು ನಾವು ಅರಿತುಕೊಳ್ಳುವುದು ಮುಖ್ಯ ಎಂದರು.
ಹಿರಿಶಾಂತವೀರ ಮಹಾಸ್ವಾಮಿಗಳು ಶಾಖಾ ಗವಿಮಠ ಹಡಗಲಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಷಣ್ಮುಖಪ್ಪ ಪೂಜಾರ್, ಕೊಟ್ರಮ್ಮ ದಿವಾಕರ್, ವಿಜಯ್ ಕುಮಾರ್, ಬಣಕಾರ ರಾಜಶೇಖರ ಪ್ರಧಾನ ಕರ್ಯದರ್ಶಿ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಂ. ರಾಜಶೇಖರ್, ಪುಷ್ಪಾ ದಿವಾಕರ್, ಪಾಟೀಲ್ ಬೆಟ್ಟನಗೌಡ, ಎಂ.ಟಿ. ಸುಭಾಶ್ಚಂದ್ರ, ಕೆ.ಎಂ. ಶಿವಾನಂದಯ್ಯ, ಹರಪನಹಳ್ಳಿ ಮಂಜುನಾಥ ಹಾಗೂ ಇತರರಿದ್ದರು.