ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಸೆ.1ರಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ಬಸವದಳದ 1609ನೇ ಶರಣ ಸಂಗಮದಲ್ಲಿ ವಚನ ಶ್ರಾವಣ-2024ರ ಮಂಗಲೋತ್ಸವ ಕಾರ್ಯಕ್ರಮ ಜರುಗುವುದು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಪೂಜ್ಯಶ್ರೀ ಮ.ನಿ.ಪ್ರ. ಡಾ. ಮಹಾಂತ ಬಸವಲಿಂಗ ಸ್ವಾಮಿಗಳು, ಶ್ರೀಗುರು ಬಸವೇಶ್ವರ ಮಠ, ಬೇಲೂರು ಇವರು ವಹಿಸಲಿರುವರು. ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷ ಶರಣ ವಿ.ಕೆ. ಕರೇಗೌಡ್ರ ವಹಿಸುವರು.
ವಚನ ಚಿಂತನೆಯನ್ನು ನಿಂಗಮ್ಮ ಹೂಗಾರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್.ಎಸ್. ಹರ್ಲಾಪೂರ ಮಾಡುವರು. ಶರಣ ವಿ.ಪ ಸದಸ್ಯ ಪ್ರೊ. ಎಸ್.ವಿ. ಸಂಕನೂರ, ಶರಣ ಚಂದ್ರಶೇಖರ ಬಿ.ತಡಸದ, ಶರಣೆ ವಿದ್ಯಾವತಿ ಎ.ಗಡಗಿ, ಪ್ರೊ. ಚಂದ್ರಶೇಖರ ವಸ್ತçದ, ಶರಣ ಬಾಲಚಂದ್ರ ಭರಮಗೌಡ್ರ, ಶರಣ ಕೆ.ಎಸ್. ಚೆಟ್ಟಿ, ಶರಣ ಎಸ್.ಎಂ. ಕವಳಿಕಾಯಿ, ಶರಣ ಶೇಖಣ್ಣ ಎಸ್.ಕಳಸಾಪೂರಶೆಟ್ರು ಅತಿಥಿಗಳಾಗಿ ಆಗಮಿಸುವರು.
ಕಾರಣ ಬಸವದಳ, ಬಸವಕೇಂದ್ರ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘ, ಗದಗ ತಾಲೂಕಾ ಶರಣ ಸಾಹಿತ್ಯ ಪರಿಷತ್ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಿಕರ ಪರವಾಗಿ ಪ್ರಕಾಶ ಅಸುಂಡಿಯವರು ವಿನಂತಿಸಿದ್ದಾರೆ.