ಬೆಂಗಳೂರು: ಕಾರಿನ ಗಾಜು ಹೊಡೆದು ಕಳ್ಳತನ ಮಾಡಿದ್ದ ನಾಲ್ವರನ್ನು ಬಂಧಿಸುವಲ್ಲಿ ಇಂದಿರಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ರಸ್ತೆ ಬದಿ ಪಾರ್ಕ್ ಮಾಡಿ ಶಾಪಿಂಗ್, ಬ್ಯಾಂಕ್ ಕೆಲಸ ಅಂತಾ ಹೋಗುವವರೆ ಇವರ ಟಾರ್ಗೆಟ್ ಆಗಿದ್ದು, ಹಾಡಹಗಲೇ ಕಾರು ಗಾಜು ಹೊಡೆದು ಕಳ್ಳತನ ಮಾಡುತ್ತಿದ್ದರು. ಕಾರು ಗ್ಲಾಸ್ ಹೊಡೆದು ಲ್ಯಾಪ್‌ಟಾಪ್, ಬೆಲೆಬಾಳುವ ವಸ್ತುಗಳ ಕಳ್ಳತನ ಮಾಡ್ತಿದ್ದರು.
ಕಳೆದ ಗುರುವಾರ ಇಂದಿರಾನಗರದಲ್ಲಿ ಈ ಗ್ಯಾಂಗ್ ಕಳ್ಳತನ ಮಾಡಿದ್ದರು. ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು ಬ್ಯಾಗ್ ಕದ್ದು ಎಸ್ಕೇಪ್ ಆಗಿದ್ದರು. ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



