RCB ಫ್ಯಾನ್ಸ್ ಗೆ ಬಿಗ್ ಶಾಕ್ ಎದುರಾಗಿದ್ದು, ಮುಂದಿನ ಸೀಸನ್ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೀಟೈನ್ ಲಿಸ್ಟ್ ಮಾಡಿಕೊಂಡಿದೆ.
ಆದರೆ, ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೊರತಾಗಿ ಮತ್ಯಾರ ಹೆಸರು ರೀಟೈನ್ ಲಿಸ್ಟ್ನಲ್ಲಿದೆ ಎಂಬ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ರೀಟೈನ್ ಎಂದು ಬಂದರೆ ಆರ್ಸಿಬಿ ಮೊದಲ ಆದ್ಯತೆ ಕೊಹ್ಲಿ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇದರ ಮಧ್ಯೆಯೂ ಕೊಹ್ಲಿ ಮೆಗಾ ಹರಾಜಿಗೆ ಬರ್ತಾರಾ? ಅನ್ನೋ ಒಂದು ಪ್ರಶ್ನೆ ಎದ್ದಿದೆ.
ವಿರಾಟ್ ಕೊಹ್ಲಿ ಮೆಗಾ ಹರಾಜಿಗೆ ಬರಬೇಕು ಅನ್ನೋ ಬೇಡಿಕೆ ಇದೆ. ಒಂದು ವೇಳೆ ಕೊಹ್ಲಿ ಹರಾಜಿಗೆ ಬಂದರೆ ಎಲ್ಲಾ ಐಪಿಎಲ್ ತಂಡಗಳು ಮುಗಿ ಬೀಳಲಿವೆ. ಕೊಹ್ಲಿಯನ್ನು ಖರೀದಿ ಮಾಡಲು ಕನಿಷ್ಠ 25-50 ಕೋಟಿ ಬೇಕಾಗಬಹುದು. ಇದು ಒಂದು ತಂಡದ ಅರ್ಧ ಬಜೆಟ್ನಷ್ಟು. ಕೊಹ್ಲಿ ಹರಾಜಿಗೆ ಬರಬೇಕು, ಎಷ್ಟು ಕೋಟಿಗೆ ಸೇಲ್ ಆಗಲಿದ್ದಾರೆ ಅನ್ನೋದು ನೋಡಬೇಕು ಎಂಬ ಕೂಗು ಎದ್ದಿದೆ.
ಫ್ಯಾನ್ಸ್ ಈಗಾಗಲೇ ಕೊಹ್ಲಿ ಹರಾಜಿಗೆ ಬರೋದು ಗ್ಯಾರಂಟಿ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ವಿರಾಟ್ ಕೊಹ್ಲಿ ಹರಾಜಿಗೆ ಬಂದರೆ ಆರ್ಸಿಬಿ ಎಷ್ಟು ಕೋಟಿ ಬೇಕಾದ್ರೂ ಸುರಿದು ಖರೀದಿ ಮಾಡೋದು ಪಕ್ಕಾ ಎನ್ನಲಾಗಿದೆ.