ACB ದಾಳಿ ವೇಳೆ ಟಾಯ್ಲೆಟ್​ನಲ್ಲಿ ದುಡ್ಡು ಎಸೆದ, ಎಸಿಬಿ ನಂತರ ಮಾಡಿದ್ದೇನು?

0
Spread the love

ಮುಂಬೈ:- ಇಲ್ಲಿನ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದು, ಬಳಿಕ ACB ಮಾಡಿದ್ದು ನೋಡಿದ್ರೆ ನೀವೆ ಶಾಕ್ ಆಗ್ತೀರಾ.

Advertisement

ಎಸ್, ಮುಂಬೈನ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಎಸಿಬಿ ರೇಡ್ ಮಾಡಿದ ಸಮಯದಲ್ಲಿ ಲಂಚದ ಹಣವನ್ನು ಶೌಚಾಲಯದಲ್ಲಿ ಎಸೆದು, ಫ್ಲಶ್ ಮಾಡಿದ್ದಾರೆ. ಈಗ ಆ ಹಣವನ್ನು ಹುಡುಕಲು ಎಸಿಬಿ ಆಫೀರ್ಸ್‌ ದಹಿಸಾರ್ ಪ್ರದೇಶದಲ್ಲಿ ಒಟ್ಟು 20 ಚರಂಡಿಗಳನ್ನು ಜಾಲಾಡಿದ್ದಾರೆ.

ಇತ್ತೀಚೆಗೆ ಕಂಪನಿಯೊಂದರಲ್ಲಿ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ 40 ವರ್ಷದ ವ್ಯಕ್ತಿಯೊಬ್ಬರು ಎಸಿಬಿಗೆ ದೂರು ನೀಡಿದ್ದರು. ಬೃಹನ್ ಮುಂಬೈ ಮಹಾನಗರ ಪಾಲಿಕೆಯಿಂದ ಪಿಎನ್​ಜಿ ಗ್ಯಾಸ್​ ಕನೆಕ್ಷನ್ ಮಾಡಲು ಅಗ್ನಿಶಾಮಕ ಇಲಾಖೆಯಿಂದ ನೋ ಆಬ್ಜ್​ಕ್ಷನ್ ಸರ್ಟಿಫಿಕೆಟ್​ ಪಡೆಯಲು ಅಂತ ಆ ಕಂಪನಿಯಿಂದ ರೆಸ್ಟೋರೆಂಟ್​ವೊಂದು ಸೇವೆ ತೆಗೆದುಕೊಂಡಿತ್ತು.

ಅದರ ಜವಾಬ್ದಾರಿಯನ್ನು ಈ 40 ವರ್ಷದ ವ್ಯಕ್ತಿ ಪಡೆದುಕೊಂಡಿದ್ದ. ಮಹಾನಗರ ಪಾಲಿಕೆಗೆ ಭೇಟಿ ಕೊಟ್ಟು ಅರ್ಜಿಯನ್ನು ಕೊಟ್ಟಾಗ ಬಿಎಂಸಿ ಹಿರಿಯ ಅಧಿಕಾರಿಯಾದ ಪ್ರಹ್ಲಾದ್ ಶಿಟೋಳೆ 1 ಲಕ್ಷ 30 ಸಾವಿರ ರೂಪಾಯಿಗೆ ಬೇಡಿಕೆಯಿಟ್ಟಿದ್ದರಂತೆ. ಅಷ್ಟು ಹಣ ನೀಡಿದರೆ ಮಾತ್ರ ಎನ್​ಒಸಿ ಕೊಡುವುದಾಗಿ ಹೇಳಿದ್ದರಂತೆ.

ಇದಕ್ಕೆ ಸಂಪರ್ಕಾಧಿಕಾರಿ ಒಪ್ಪದಿದ್ದಾಗ ಕೊನೆಗೆ 80 ಸಾವಿರಕ್ಕೆ ಲಂಚದ ಡೀಲ್ ಬಂದು ನಿಲ್ಲುತ್ತದೆ. ಬಾಯ್ಬಿಟ್ಟು ಲಂಚ ಕೇಳದ ಶಿಟೋಳೆ ಅವರು ಕ್ಯಾಲ್ಕುಲೇಟರ್​ನಲ್ಲಿ ಟೈಪ್ ಮಾಡಿ ಲಂಚದ ಹಣವನ್ನು ಉಲ್ಲೇಖಿಸಿದ್ದಾರೆ. ಇದಕ್ಕೆ ಒಪ್ಪದ ಆ ಸಂಪರ್ಕಾಧಿಕಾರಿ ಕೊನೆಗೆ ಎಸಿಬಿ ಹೋಗಿ ದೂರು ನೀಡಿದ್ದಾರೆ.

ಕೂಡಲೇ ಶಿಟೋಳೆಯನ್ನು ಬಲೆಗೆ ಕೆಡುವಲು ಎಸಿಬಿ ಅಧಿಕಾರಿಗಳು, 60 ಸಾವಿರ ರೂಪಾಯಿ ಕೊಡುವುದಾಗಿ ಒಪ್ಪಿಕೊಳ್ಳಿ ಎಂದು ಸಂಪರ್ಕಾಧಿಕಾರಿಗೆ ಹೇಳುತ್ತಾರೆ. 60 ಸಾವಿರ ರೂಪಾಯಿ ಕೊಡಲು ಹೊರಟ ಸಂಪರ್ಕಾಧಿಕಾರಿಗೆ ಶಿಟೋಳೆ ಗ್ರೌಂಡ್ ಫ್ಲೋರ್‌ಗೆ ಬರಲು ಹೇಳಿ ಆಮೇಲೆ ಲಿಫ್ಟ್​ ನಲ್ಲಿ ಹೋಗುವಾಗ 60 ಸಾವಿರ ರೂಪಾಯಿ ಲಂಚವನ್ನು ಪಡೆಯುತ್ತಾನೆ.

ಆದ್ರೆ ಶಿಟೋಳೆಗೆ ಏನೋ ಒಂದು ಅನುಮಾನ ಬರುತ್ತದೆ. ಕೊಟ್ಟ ನೋಟುಗಳ ಮೇಲೆ ಒಂದು ರೀತಿಯ ಪೌಡರ್​ ಇರುವುದನ್ನು ಕಂಡು ನೇರವಾಗಿ ತನ್ನ ನಾಲ್ಕನೇ ಫ್ಲೋರ್​ನಲ್ಲಿರುವ ಆಫೀಸ್​ಗೆ ಹೋಗಿ ದುಡ್ಡುನ್ನು ಟಾಯ್ಲೆಟ್​ನಲ್ಲಿ ಎಸೆದು ಫ್ಲಶ್ ಮಾಡಿದ್ದಾನೆ. ಅಸಲಿಗೆ ಎಸಿಬಿ ಅಧಿಕಾರಿಗಳು ಲಂಚದ ನೋಟಿನ ಸೀರಿಯಲ್ ನಂಬರ್ ನೋಟ್ ಮಾಡಿಕೊಂಡಿದ್ದರು.

ಅದರ ಜೊತೆಗೆ ನೋಟುಗಳಿಗೆ ಒಂದು ವಿಧವಾದ ಪೌಡರ್ ಹಾಕಿದ್ದರು. ಇದರಿಂದ ಲಂಚ ತೆಗೆದುಕೊಂಡ ವ್ಯಕ್ತಿಯ ಕೈಯನ್ನು ಸೆಲ್ಯೂಷನ್​ನಲ್ಲಿ ಅದ್ದಿ ನೋಡಿದಾಗ ಅದು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಅದನ್ನೇ ಸಾಕ್ಷಿಯಾಗಿ ಕೋರ್ಟ್​​ಗೆ ಸಲ್ಲಿಕೆ ಮಾಡಲಾಗುತ್ತದಂತೆ.

ಕೋರ್ಟ್​ಗೆ ಸಾಕ್ಷಿ ಸಲ್ಲಿಸಲು ನೋಟುಗಳೇ ಪ್ರಮುಖವಾದ ಸಾಕ್ಷಿ. ಹೀಗಾಗಿ ಎಸಿಬಿ ಅಧಿಕಾರಿಗಳು ಹಣವನ್ನು ರಿಕವರಿ ಮಾಡಲು ಫ್ಲಂಬರ್ ಸಹಾಯದಿಂದ 20 ಗಟಾರ್​ಗಳನ್ನು ಅಗೆದು ಹುಡುಕಾಟ ನಡೆಸಿದ್ದಾರೆ. ಈಗಾಗಲೇ 57 ಸಾವಿರ ರೂಪಾಯಿ ಹಣವನ್ನು ರಿಕವರಿ ಮಾಡಲಾಗಿದೆ. ಉಳಿದ ಮೂರು ಸಾವಿರ ರೂಪಾಯಿ ಕೊಚ್ಚಿಕೊಂಡು ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here