ಬೆಂಗಳೂರು: ಏಕಾಂತದಲ್ಲಿದ್ದ ಪ್ರೇಮಿಗಳಿಗೆ ಯುವಕನಿಂದ ಕಿರಿಕಿರಿ ಉಂಟಾದ ಹಿನ್ನೆಲೆ, ರೊಚ್ಚಿಗೆದ್ದ ಪ್ರೇಮಿಗಳು ಯುವಕನಿಗೆ ಗೂಸ ಕೊಟ್ಟ ಘಟನೆ ಬೆಂಗಳೂರಿನ ಕಬ್ಬನ ಪಾರ್ಕ್ ನಲ್ಲಿ ಜರುಗಿದೆ.ಪಾರ್ಕ್ ನಲ್ಲಿ ಯುವಕ ಹಾಗೂ ಆತನ ಸ್ನೇಹಿತ ಸುತ್ತಾಡುತ್ತಿದ್ದರು. ಈ ವೇಳೆ ಪಾರ್ಕ್ ನಲ್ಲಿ ಕಂಡ ಪ್ರೇಮಿಗಳಿಗೆ ಕಿರಿಕಿರಿ ಉಂಟಾಗಿದೆ.
Advertisement
ಮರದ ಕೆಳಗಡೆ ಏಕಾಂತವಾಗಿದ್ದ ಪ್ರೇಮಿಗಳ ಬಳಿ ಹೋಗಿ ಕಿರಿಕಿರಿ ತೆಗೆದು ಇಲ್ಲಿಂದ ಹೋಗಿ ಎಂದಿದ್ದಾನೆ. ಯುವಕನ ಮಾತಿನಿಂದ ಒಂದಷ್ಟು ಪ್ರೇಮಿಗಳ ಹೋಗಿದ್ದರು. ಮತ್ತೊಂದಷ್ಟು ಪ್ರೇಮಿಗಳಿಂದ ಯುವಕನಿಗೆ ಅವಾಜ್ ಹಾಕಿದ್ದಾರೆ. ಯುವಕನ ಹಿಡಿದು ಪ್ರೇಮಿಗಳು ಥಳಿಸಿ ಕಳುಹಿಸಿದ ಘಟನೆ ಜರುಗಿದೆ.


