ಬಹುತೇಕ ನಾಳೆಯೇ ಕೋರ್ಟ್ʼಗೆ ಚಾರ್ಜ್‌ಶೀಟ್ ಸಲ್ಲಿಕೆ! ಅಧಿಕಾರಿಗಳಿಂದ ಚಾರ್ಜ್‌ಶೀಟ್ ಪ್ರತಿಗಳ ಪರಿಶೀಲನೆ

0
Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಆರೋಪಿಯಾಗಿ ಜೈಲು ಸೇರಿದ ದರ್ಶನ್ ಹಾಗೂ ಇತರರಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ.

Advertisement

ಪರಪ್ಪನ ಅಗ್ರಹಾರದಲ್ಲಿ ರೌಡಿಶೀಟರ್‌ಗಳ ಜೊತೆ ದರ್ಶನ್ ಸಿಗರೇಟು ಸೇದುತ್ತಾ ಕಾಲ ಕಳೆದ ಫೋಟೋ ವೈರಲ್ ಆದ ಬೆನ್ನಲ್ಲೇ ಜೈಲಿನ ಅಕ್ರಮಗಳು ಒಂದೊಂದಾಗಿಯೇ ಬಹಿರಂಗ ಆದವು.

ಜೈಲಿನೊಳಗೆ ಖೈದಿಗಳು ಮೊಬೈಲ್ ಬಳಕೆ ಮಾಡುತ್ತಿರುವುದು ಕೂಡ ಬೆಳಕಿಗೆ ಬಂತು. ಈ ಎಲ್ಲ ಅಕ್ರಮಗಳ ಬಗ್ಗೆ ತನಿಖೆ ಮಾಡಲು ಸಿಸಿಬಿ ಹಿರಿಯ ಅಧಿಕಾರಿಗಳಿಗೆ ಅದೇಶಿಸಲಾಗಿದೆ. ಈಗ ಪೊಲೀಸರು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಲು ರೆಡಿ ಆಗಿದ್ದಾರೆ.

ಬುಧವಾರ (ಸೆಪ್ಟೆಂಬರ್ 4) ದೋಷಾರೋಪ ಪಟ್ಟಿ ಕೋರ್ಟ್ ಕೈ ಸೇರುವ ಸಾಧ್ಯತೆ ಇದೆ. ಚಾರ್ಜ್ ಶೀಟ್ ನಲ್ಲಿ ನಾಲ್ಕು ಸಾವಿರ ಪುಟ ಇವೆ ಎನ್ನಲಾಗಿದೆ. ನೂರಾರು ಸಾಕ್ಷಿಗಳು, ಅನೇಕ ವರದಿಗಳು ಇದರಲ್ಲಿ ಇರಲಿವೆ. ಈ ಚಾರ್ಜ್ ಶೀಟ್ ನಲ್ಲಿ ದರ್ಶನ್ ಅವರನ್ನು ಎ2 ಇಂದ ಎ1 ಆರೋಪಿ ಆಗಿ ಬದಲಾಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರತಿಯೊಂದು ಸಾಕ್ಷಿಗಳೂ ಕೂಡ ಪ್ರಕರಣಕ್ಕೆ ಅಷ್ಟೆ ಪ್ರಾಮುಖ್ಯತೆಯನ್ನ ಒದಗಿಸಿದ್ದು ದರ್ಶನ್ ಮನೆಯ ಸಿಸಿಟಿವಿ ರಿಟ್ರೀವ್ ಸಹ ಒಂದು ಮಹತ್ವದ ಸಾಕ್ಷಿಯಾಗಿದೆ. ಕೃತ್ಯ ಬಯಲಿಗೆ ಬಂದ ಬಳಿಕ ಆರೋಪಿಗಳು ದರ್ಶನ್ ಮನೆಗೆ ಸೇರಿ ಮೀಟಿಂಗ್ ಮಾಡಿದ್ದರು ಏನ್ನುವ ವಿಡಿಯೋವನ್ನು ಡಿಲೀಟ್ ಮಾಡಲಾಗಿತ್ತು.

ಡಿವಿಆರ್‌ನನ್ನು ಎಫ್ ಎಸ್ ಎಲ್‌ಗೆ ರವಾನೆ ಮಾಡಿದ್ದರು.‌ ಎಫ್ ಎಸ್ ಎಲ್ ಅಧಿಕಾರಿಗಳು ಡಿವಿಆರ್‌ನಲ್ಲಿರುವ ಡಿಲೀಟೆಡ್ ವೀಡಿಯೊವನ್ನ ಪುನಃ ಪಡೆದುಕೊಂಡಿದ್ದಾರೆ. ದರ್ಶನ್ ಅವರು ತಪ್ಪು ಮಾಡಿಲ್ಲ ಎಂಬರ್ಥದಲ್ಲಿ ಮಾತನಾಡಿದ ಸೆಲೆಬ್ರಿಟಿಗಳ ಹೇಳಿಕೆಗಳನ್ನೂ ಕೂಡ ಪೊಲೀಸರು ಅನಾಲೈಝ್ ಮಾಡ್ತಿದ್ದಾರೆ.

ಈ ಹಿನ್ನಲೆಯಲ್ಲಿ ಇವೆಲ್ಲವೂ ಜಾಮೀನಿಗೆ ತೊಂದರೆಯಾಗುವ ಸಾಧ್ಯತೆಗಳೂ ಹೆಚ್ಚಿದೆ. ಇನ್ನು ಚಾರ್ಜ್ ಶೀಟ್ ಸಲ್ಲಿಸೋದಕ್ಕೆ ಕೌಂಟ್‌ಡೌನ್‌ ಆರಂಬವಾಗಿದೆ. ಚಾರ್ಜ್ ಶೀಟ್‌ನಲ್ಲಿ, ಸಿಡಿ ಆರ್ ರಿಪೋರ್ಟ್ ಗಳು , ಬಟ್ಟೆಗಳ ಸ್ಯಾಂಪಲ್ಸ್ , ಸಿಸಿಟಿವಿ , ಎಫ್ ಎಸ್ ಎಲ್ ರಿಪೋರ್ಟ್‌ಗಳು , 164 ಹೇಳಿಕೆಗಳೆಲ್ಲಾದರ ಉಲ್ಲೇಖವಿದೆ.

ರೇಣುಕಾಸ್ವಾನಿ ಕೊಲೆಗೆ ಬಳಕೆಯಾದ ವಸ್ತುಗಳು ಕೂಡ ಪೊಲೀಸರ ಬಳಿದೆ. ಕೊಲೆಗೆ ಮುನ್ನ ಸ್ಟೋನಿ ಬ್ರೂಕ್ ಸಿಬ್ಬಂಧಿಗಳ ಹೇಳಿಕೆ ಪಟ್ಟಣಗೆರೆ ಶೆಡ್ ಸೆಕ್ಯೂರಿಟಿ ಗಾರ್ಡ್ ಹೇಳಿಕೆಗಳು ಸಾಕಷ್ಟು ಮಹತ್ವ ಪಡೆದಿದೆ. ಸದ್ಯ ಇಲ್ಲಿಯವರೆಗೆ 200ಕ್ಕೂ ಹೆಚ್ಚು ಸಾಕ್ಷಿಗಳನ್ನ ಕಲೆ ಹಾಕಿದ್ದಾರೆ.


Spread the love

LEAVE A REPLY

Please enter your comment!
Please enter your name here