ಬೆಂಗಳೂರು: ಜೆಜೆ ನಗರ ಪೊಲೀಸರು ಖತರ್ನಾಕ್ ಗ್ಯಾಂಗ್‌ನ ಕಳ್ಳಾಟವನ್ನು ಬೇಧಿಸಿದ್ದಾರೆ. ಏರ್‌ಪೋರ್ಟ್‌ನಲ್ಲಿ ವಿದೇಶದಿಂದ ಬರುವವರ ಬಳಿ ಇ-ಸಿಗರೇಟ್ ಸೀಜ್ ಮಾಡಲಾಗುತ್ತೆ. ಆದರೆ ಈ ರೀತಿ ಸೀಜ್ ಆದ ವಸ್ತುಗಳನ್ನು ಇತರೆ ವೇಸ್ಟ್ ಜತೆ ಹರಾಜು ಹಾಕಲಾಗುತ್ತದೆ. ಹರಾಜಿನಲ್ಲಿ ತೆಗೆದುಕೊಂಡ ವಸ್ತುಗಳನ್ನು ಜೆಜೆ ನಗರ ಠಾಣಾ ವ್ಯಾಪ್ತಿಯ ಗೋಡೌನ್‌ನಲ್ಲಿ ಶೇಖರಿಸಲಾಗುತ್ತದೆ.
Advertisement
ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಖದೀಮರು ಹರಾಜಿನಲ್ಲಿ ಬಂದ ಇ-ಸಿಗರೇಟ್‌ಗಳನ್ನು ವಿಂಗಡಿಸುತ್ತಿದ್ದರು. ಬಳಸಿದ ಇ -ಸಿಗರೇಟ್‌ಗಳನ್ನು 300-400 ರೂ. ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ತಿಳಿದು ದಾಳಿ ನಡೆಸಿದ ಜೆಜೆ ನಗರ ಪೊಲೀಸರು, ಇಬ್ಬರು ಆರೋಪಿಗಳಿಂದ ಸುಮಾರು 110 ಇ- ಸಿಗರೇಟ್ ವಶಕ್ಕೆ ಪಡೆಯಲಾಗಿದೆ.