ಆನ್‌ಲೈನ್ ಫುಡ್ ಪ್ರಿಯರೇ ಎಚ್ಚರ: ನೂಡಲ್ಸ್ ತಿಂದು ಬಾಲಕಿ ದುರ್ಮರಣ!

0
Spread the love

ತಮಿಳುನಾಡು:- ತಮಿಳುನಾಡಿನ ತಿರುಚ್ಚಿಯಲ್ಲಿ ಆನ್ ಲೈನ್ ನಲ್ಲಿ ಖರೀದಿಸಿದ್ದ ನೂಡಲ್ಸ್ ತಿಂದು ಬಾಲಕಿ ಸಾವನ್ನಪ್ಪಿರುವ ಘಟನೆ ಜರುಗಿದೆ.

Advertisement

ತಿರುಚ್ಚಿಯ ತಿರುವೆರುಂಪುರ್ ಮೂಲದವರಾದ ಸ್ಟೆಫಿ ಜಾಕ್ವೆಲಿನ್ ಮೃತ ಬಾಲಕಿ. ಮಗಳಿಗೆ ನೂಡಲ್ಸ್​​ ಇಷ್ಟವೆಂದು ಬಾಲಕಿಯ ತಾಯಿ ಕಳೆದ ಶನಿವಾರ ರಾತ್ರಿ ಆನ್‌ಲೈನ್‌ನಲ್ಲಿ ಮಸಾಲೆಯುಕ್ತ ನೂಡಲ್ಸ್ ಅನ್ನು ಆರ್ಡರ್ ಮಾಡಿದ್ದರು. ರಾತ್ರಿ ನೂಡಲ್ಸ್ ತಿಂದು ಮಲಗಿದ ಬಾಲಕಿ ಮರುದಿನ ಬೆಳಗ್ಗೆ ಬಹಳ ಹೊತ್ತಾದರೂ ಏಳಲಿಲ್ಲ ಎನ್ನಲಾಗಿದೆ. ಇದಾದ ಬಳಿಕ ಪೋಷಕರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ ವೈದ್ಯರು ಬಾಲಕಿ ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ ಪಡೆದ ನಂತರ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಚ್ಚಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ವೇಳೆ ನೂಡಲ್ಸ್ ತಿಂದ ನಂತರ ಬಾಲಕಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಇದನ್ನು ಆರೋಗ್ಯ ಸಚಿವ ಎಂ.ಸುಬ್ರಮಣಿಯನ್ ಖಚಿತಪಡಿಸಿದ್ದಾರೆ ಎಂದು ಹೇಳಲಾಗಿದೆ.


Spread the love

LEAVE A REPLY

Please enter your comment!
Please enter your name here