ಬೆಳಗಾವಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಲೈನ್‌ ಮ್ಯಾನ್ ಸಾವು!

0
Spread the love

ಬೆಳಗಾವಿ: ವಿದ್ಯುತ್ ಸ್ಪರ್ಶಿಸಿ ಲೈನ್‌ಮ್ಯಾನ್ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹತ್ತಿರ ಜಾಕ್ವೆಲ್ ಬಳಿ ನಡೆದಿದೆ. ಧಾರವಾಡ ಮತ್ತು ಹುಬ್ಬಳಿ ಜಿಲ್ಲೆಗೆ ನೀರು ಬಿಡುವ ಜಾಕ್ವೆಲ್ ಹತ್ತಿರ ನಡೆದ ಘಟನೆಯಾಗಿದ್ದು, ಸುರೇಶ ಹನಮಂತಪ್ಪ ಇಂಚಲ‌  (46) ಮೃತ ದುರ್ದೈವಿಯಾಗಿದ್ದಾರೆ. ಹುಬ್ಬಳ್ಳಿ -ಧಾರವಾಡ ನೀರು ಬಿಡುಗಡೆ ಮಾಡುವ ಜಾಕ್ವೆಲ್ ಬಳಿ ಈ ದುರಂತ ನಡೆದಿದ್ದು,

Advertisement

ಹೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು‌, ಗ್ರಾಮದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಆಗಮಿಸುವಂತೆ ಮೃತರ ಕುಟುಂಬಸ್ಥರು ಪಟ್ಟುಹಿಡಿದರು. ಇಲ್ಲದೇ ಇದ್ದರೆ ಶವ ತೆಗೆಯುವುದಿಲ್ಲ ಎಂದು ಪ್ರತಿಭಟಿಸಿದರು. ಸವದತ್ತಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here