ಬೆಂಗಳೂರು:- ನಾಗವಾರ ನಿಲ್ದಾಣದ ಕಟ್ ಮತ್ತು ಕವರ್ ಶಾಫ್ಟ್ನಲ್ಲಿ ತುಂಗಾ-ಟಿಬಿಎಂ ಇಂದು ಪೂರ್ಣ ಸುರಂಗ ಕೊರೆದು ಹೊರಬಂದಿದೆ.
Advertisement
ನಮ್ಮ ಮೆಟ್ರೋದ ಪಿಂಕ್ ಲೈನ್ ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ರೈಲು ಸಂಪರ್ಕ ಕಾಮಗಾರಿ ನಡೆಯುತ್ತಿದೆ. ಸುರಂಗ ಕೊರೆಯುವ ಯಂತ್ರ ತುಂಗಾ ಬುಧವಾರ ಸೌತ್ ಕಟ್ ಮತ್ತು ಕವರ್ ಶಾಫ್ಟ್ ನಲ್ಲಿ 936.6 ಮೀ ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಳಿಸಿ ಹೊರಬಂದಿದೆ. ಈ ಸುರಂಗ ಕೊರೆಯುವ ಯಂತ್ರ ಕಾಡುಗೊಂಡನಹಳ್ಳಿ ನಿಲ್ದಾಣದಲ್ಲಿ ಇದೇ ವರ್ಷ ಫೆ.02 ರಂದು ಕಾಮಗಾರಿ ಪ್ರಾರಂಭಮಾಡಿದ್ದು ನಾಗವಾರ ನಿಲ್ದಾಣದ ಸೌತ್ ಕಟ್ ಮತ್ತು ಕವರ್ ಶಾಫ್ಟ್ನಲ್ಲಿ ಪೂರ್ಣಗೊಳಿಸಿದೆ.
ಈ ಪ್ರಗತಿಯೊಂದಿಗೆ, ಒಟ್ಟು 20992 ಮೀ ಸುರಂಗ ಮಾರ್ಗದಲ್ಲಿ 20582.7 ಮೀ ಅಂದರೆ ಶೇ 98%. ಪೂರ್ಣಗೊಂಡಿದೆ.