ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಗೆ ಇಲ್ಲಿಯ ಗ್ರಾಮ ಪಂಚಾಯಿತಿ ಸದಸ್ಯ, ರಾಜ್ಯ ಮಟ್ಟದ ಕುಸ್ತಿ ಪಟು ರಮೇಶ ಭಾವಿ ಆಯ್ಕೆಯಾಗಿದ್ದಾರೆ.
Advertisement
ಭಾರತದಿಂದ ಪ್ರತಿನಿಧಿಸಿರುವ ರಮೇಶ ಅವರು ಈಗಾಗಲೇ ನೇಪಾಳದಲ್ಲಿ ಅಂತಾರಾಷ್ಟ್ರೀಯ ಯೂಥ್ ಕ್ರೀಡಾಕೂಟದ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ.
ಅಂತಾರಾಷ್ಟ್ರೀಯ ಯುವ ಕ್ರೀಡೆ ಮತ್ತು ಶಿಕ್ಷಣ ಸಂಸ್ಥೆ ಮತ್ತು ಯುಥ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಫೋರಮ್ ನೇಪಾಳ ಇವರ ಆಶ್ರಯದಲ್ಲಿ ಈ ಕುಸ್ತಿ ಪಂದ್ಯಾವಳಿಯನ್ನು ಆಯೊಜಿಸಲಾಗಿದೆ. ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಮತ್ತು ಸರ್ವ ಸದಸ್ಯರು, ಲಕ್ಕುಂಡಿ ಕುಸ್ತಿ ಪೈಲವಾನರ ಸಂಘ ಅಭಿನಂದಿಸಿದೆ.


