ಪರಿಸರ ರಕ್ಷಕ ವೀರೇಂದ್ರ ಮರಿಬಸಣ್ಣವರರಿಗೆ ಒಲಿದ ಗೌರವ

0
Chief Minister's Medal to Gadag District Incharge ACF Virendra Maribasanna
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ : ಸದಾ ಕಾಲ ತಮ್ಮ ಪ್ರಾಮಾಣಿಕ ಸೇವೆಯ ಮೂಲಕ ಸಾವಿರಾರು ಗಿಡಗಳನ್ನು ಸಂರಕ್ಷಿಸಿ, ಗಿಡಗಳನ್ನು ನೆಡುವುದರ ಮೂಲಕ ನೂತನ ಪರಿಸರ ಐಸಿರಿಯನ್ನು ಹುಟ್ಟುಹಾಕಿ ಪರಿಸರ ರಕ್ಷಕರಾಗಿ ಸೇವೆ ಸಲ್ಲಿಸಿದ ಗದಗ ಜಿಲ್ಲಾ ಪ್ರಭಾರಿ ಎಸಿಎಫ್ ಮತ್ತು ಗದಗ ಜಿಲ್ಲಾ ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ವೀರೇಂದ್ರ ಮರಿಬಸಣ್ಣವರ ಅವರಿಗೆ ಅರಣ್ಯ ಇಲಾಖೆಯ ವನ್ಯಜೀವಿಗಳ ಸಂರಕ್ಷಣೆ ವಿಭಾಗದ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

Advertisement

ಸೋಮಶೇಖರ-ಲಕ್ಷ್ಮಿ ಅವರು ವಿರೇಂದ್ರ ಮರಿಬಸಣ್ಣವರ ಅವರ ತಂದೆ ತಾಯಿಗಳು. ಹುಲಕೋಟಿಯಲ್ಲಿ ಪ್ರಾಥಮಿಕ, ಪ್ರೌಢ, ಮಾಧ್ಯಮಿಕ ಶಿಕ್ಷಣ ಪಡೆದು ಶಿರಸಿಯಲ್ಲಿ ಅರಣ್ಯ ಮಹಾವಿದ್ಯಾಲಯದಲ್ಲಿ ಪದವಿಯನ್ನು ನಂತರ ಎಮ್‌ಎಸ್‌ಸಿಯಲ್ಲಿ ಅರಣ್ಯ ಪದವಿಯನ್ನು ಪಡೆದರು.

2014ರಲ್ಲಿ ಔರಾಧ ಭಾಗದ ಅರಣ್ಯ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿ ನಂತರ 2017ರಲ್ಲಿ ಮಡಿಕೇರಿಯಲ್ಲಿ 5 ವರ್ಷ ಅಮೂಲ್ಯ ಸೇವೆ ಸಲ್ಲಿಸಿದ ಬಳಿಕ 2022ರಲ್ಲಿ ಮುಂಡರಗಿ ತಾಲೂಕಿನ ಸಸ್ಯ ಕಾಶಿ ಕಪ್ಪತ್ತಗುಡ್ಡ ವಲಯದಲ್ಲಿ ಸಾವಿರಾರು ಗಿಡಗಳನ್ನು ನೆಡುವುದರ ಮೂಲಕ ಆಮ್ಲಜನಕ ಹೆಚ್ಚಿಸಲು ಶ್ರಮಿಸಿದ್ದಾರೆ.

ಇಲ್ಲಿನ ಬೋರಾಳ ಸಸ್ಯ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಪೋಷಣೆ ಮಾಡಿ ಹಸಿರೀಕರಣ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರೈತರ ಜಮೀನುಗಳಲ್ಲಿ ಹಸಿರು ಬಿತ್ತಿದ ಶ್ರೇಯಸ್ಸು ಇವರದಾಗಿದೆ.

ಮಡಿಕೇರಿ ಅರಣ್ಯ ಭಾಗದಲ್ಲಿ 5 ವರ್ಷಗಳ ಕಾಲ ವನ್ಯ ಜೀವಿಗಳ ಸಂರಕ್ಷಣೆ ಸೇವೆಯಲ್ಲಿದ್ದಾಗ ಆನೆ, ಹುಲಿ, ಚಿರತೆ ಹೀಗೆ ಹಲವು ವನ್ಯ ಪ್ರಾಣಿಗಳ ರಕ್ಷಕರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರಲ್ಲದೆ ರೈತರ ಜಮೀನುಗಳಿಗೆ ಲಗ್ಗೆ ಇಡುವ ಆನೆಗಳ ದಾಳಿಯನ್ನು ತಡೆಯಲು ಅವುಗಳ ರಕ್ಷಣೆಗೆ ನಿರಂತರವಾಗಿ ಶ್ರಮಿಸಿದ ಶ್ರೇಯಸ್ಸು ಇವರದು. ಇದರಿಂದ ಅರಣ್ಯ ಭಾಗದಲ್ಲಿ ನೆಲೆಸಿದ್ದ ಗ್ರಾಮಗಳ ಜನತೆಯ ಮತ್ತು ಹಿರಿಯ ಅಧಿಕಾರಿಗಳ ಸನ್ಮಾನಕ್ಕೆ ಭಾಜನರಾಗಿದ್ದಾರೆ.

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡವನ್ನು ಇನ್ನಷ್ಟು ಹಸಿರಾಗಿಸುವುದರ ಜೋತೆಗೆ ಜಿಲ್ಲೆಯ ಇನ್ನುಳಿದ ಭಾಗಗಳಲ್ಲಿಯೂ ಸಸಿಗಳನ್ನು ನೆಡಲು ಕಕ್ಕುರ ನರ್ಸರಿಯಲ್ಲಿ ೩ ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಬೆಳಸಿ ಕಪ್ಪತ್ತಗುಡ್ಡದಲ್ಲಿ, ಸರಕಾರಿ ಸ್ಥಳಗಳಲ್ಲಿ, ರಸ್ತೆ ಬದುಗಳಲ್ಲಿ, ರೈತರ ಜಮೀನುಗಳಲ್ಲಿ ಬೆಳೆಯುವಂತೆ ಮಾಡಿರುವ ಶ್ರೇಯಸ್ಸು ಇವರದಾಗಿದೆ. ಇಲ್ಲಿರುವ ಪ್ರಾಣಿಗಳ ರಕ್ಷಣೆಗೆ ಸಿಬ್ಬಂದಿಗಳ ಜೊತೆಯಲ್ಲಿ ನಿಂತು ಕಪ್ಪತ್ತಗುಡ್ಡ ಭಾಗದಲ್ಲಿ ಬೆಂಕಿ ಬೀಳದಂತೆ ಶ್ರಮಿಸಿದ್ದರಿಂದ ಪರಿಸರವಾದಿಗಳ ಪ್ರಶಂಸೆಗೂ ಪಾತ್ರರಾಗಿದ್ದಾರೆ.

ಔರಾಧ, ಮಡಿಕೇರಿ, ಕಪ್ಪತ್ತಗುಡ್ಡ ಭಾಗದಲ್ಲಿನ ಇವರ ಉತ್ತಮ ಸೇವೆಗೆ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿರುವ ವೀರೇಂದ್ರ ಮರಿಬಸಣ್ಣನವರ ಅರಣ್ಯ ಸಂರಕ್ಷಣೆ, ಅಕ್ರಮ ತಡೆಗಟ್ಟುವಿಕೆ, ವನ್ಯಜೀವಿ ಸಂರಕ್ಷಣೆ, ಸಂಶೋಧನೆ, ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಿಸುವುದು, ನೆಡತೋಪು ಬೆಳೆಸುವಂತಹ ಅಭಿವೃದ್ಧಿ ಕಾರ್ಯಗಳು, ಮಾನವ ಪ್ರಾಣಿ ಸಂಘರ್ಷ ಹಾಗೂ ಇತರೆ ನವೀನ ಆಲೋಚನೆಗಳನ್ನು ಕಾರ್ಯಗತಗೊಳಿಸಿದ ಇವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸನ್ಮಾನಿಸಿದರು.

ಪರಿಸರ ರಕ್ಷಕರಾಗಿ ಅರಣ್ಯ ಕಾಯುವ ಎಲ್ಲಾ ಹಂತದ ಸಿಬ್ಬಂದಿಗಳ, ಪರಿಸರವಾದಿಗಳ ಶ್ರಮದಿಂದ ನಾವೆಲ್ಲರೂ ಉತ್ತಮ ಆಮ್ಲಜನಕ, ಉತ್ತಮ ಮಳೆ ಪಡೆಯಲು ಸಾಧ್ಯವಾಗಿದೆ. ಪ್ರತಿಯೊಬ್ಬರೂ ಮುಂದಿನ ಪೀಳಿಗೆಯ ಹಿತಕ್ಕಾಗಿ ಪರಿಸರ ಬೆಳೆಸಲು ಮುಂದಾಗಬೇಕು.
– ವೀರೇಂದ್ರ ಮರಿಬಸಣ್ಣವರ.
ಮುಖ್ಯಮಂತ್ರಿ ಪದಕ ಪಡೆದ
ಗದಗ ಜಿಲ್ಲಾ ಪ್ರಭಾರಿ ಎಸಿಎಫ್.

Chief Minister's Medal to Gadag District Incharge ACF Virendra Maribasanna

ಪರಿಸರ, ವನ್ಯಪ್ರಾಣಿಗಳ ರಕ್ಷಣೆಗೆ ಆದ್ಯತೆ ನೀಡುವವರಿಗೆ ಪ್ರೋತ್ಸಾಹದಾಯಕವಾಗಿ ಮುಖ್ಯಮಂತ್ರಿಗಳ ಪದಕ ಪಡೆದು ಸಾಧನೆ ಮಾಡಿರುವ ವೀರೇಂದ್ರ ಮರಿಬಸಣ್ಣವರ ಅವರ ಪರಿಸರ, ವನ್ಯಪ್ರಾಣಿಗಳ ಬಗೆಗಿನ ಪ್ರೀತಿ, ಸೇವಾಕಾರ್ಯ ಪ್ರಶಂಸನೀಯವಾದದ್ದು.
– ಡಾ. ತೋಂಟದ ಸಿದ್ದರಾಮ ಶ್ರೀಗಳು.


Spread the love

LEAVE A REPLY

Please enter your comment!
Please enter your name here