ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳ ಆಯ್ಕೆ

0
Election of office bearers of Milk Producers Association
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಜಕ್ಕಲಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಗುರುವಾರ ನಿರ್ದೇಶಕರ ಆಯ್ಕೆ ನಡೆಯಿತು.

Advertisement

ಸಾಮಾನ್ಯ ಅಧ್ಯಕ್ಷ ಸ್ಥಾನದಿಂದ ಸ್ಪರ್ಧಿಸಿದ್ದ ಶೇಖರಪ್ಪ ಈಶ್ವರಪ್ಪ ಮೇಟಿ, ಸಾಮಾನ್ಯ ಉಪಾಧ್ಯಕ್ಷ ಸ್ಥಾನದಿಂದ ಸ್ಪರ್ಧಿಸಿದ್ದ ಅರುಣಕುಮಾರ ಅಶೋಕ ಕಡಗದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ 2 ಸ್ಥಾನಗಳಿಗೆ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಸುಗಮವಾಗಿ ನಡೆಯಿತು. ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಸಹಕಾರಿ ಸಂಘದ ಉಪನಿಬಂಧಕ ಅಧಿಕಾರಿ ಪ್ರಶಾಂತ ಜಿ.ಮುಧೋಳ ಅವಿರೋಧವಾಗಿ ಆಯ್ಕೆಗೊಂಡ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದರು.

ಈ ವೇಳೆ ನೂತನ ಅಧ್ಯಕ್ಷ ಶೇಖರಪ್ಪ ಮೇಟಿ ಮಾತನಾಡಿ, ಎಲ್ಲಿ ಸಹಕಾರ ಇರುತ್ತದೆಯೋ ಅಲ್ಲಿ ಮಾತ್ರ ಸಂಘ ಮತ್ತು ಹಾಲು ಉತ್ಪಾದಕರು ಆರ್ಥಿಕವಾಗಿ ಪ್ರಗತಿ ಕಾಣಲು ಸಾಧ್ಯ. ರೈತರ ಸ್ವಾವಲಂಬನೆಗಾಗಿ 1989ರಲ್ಲಿ ಸಂಘವನ್ನು ಇಲ್ಲಿ ಸ್ಥಾಪನೆ ಮಾಡಲಾಗಿದೆ. ನಿತ್ಯ 500 ಲೀಟರ್ ಹಾಲನ್ನು 52 ಹಾಲು ಉತ್ವಾದಕರು ಪೂರೈಸುತ್ತಿದ್ದಾರೆ. ಅವರಿಗೆ ಮತ್ತಷ್ಟು ಸೌಲಭ್ಯ ಕಲ್ಪಿಸಿ ಹೈನುಗಾರಿಗೆ ನಂಬಿರುವವರಿಗೆ ನೆರವಾಗಿ ನಿಲ್ಲುವೆ ಎಂದರು.

ನೂತನ ಉಪಾಧ್ಯಕ್ಷ ಅರುಣಕುಮಾರ ಕಡಗದ ಮಾತನಾಡಿ, ರಾಸುಗಳಿಗೆ ವಿಮೆ, ಹಾಲು ಉತ್ಪಾದಕರಿಗೆ ಆರೋಗ್ಯ ವಿಮೆ, ಸಕಾಲದಲ್ಲಿ ಬೋನಸ್ ವಿತರಣೆ ಸೇರಿದಂತೆ ಸಂಘ ಮತ್ತು ಹೈನುಗಾರರ ಪ್ರಗತಿಗಾಗಿ ಶ್ರಮಿಸುವೆ ಎಂದರು.

ಸಂಘದ ನಿರ್ದೇಶಕ ಮಂಡಳಿಯ ಬಸಪ್ಪ ಕೊಪ್ಪದ, ಜೀವನಸಾಬ ಬಸಾಪೂರ, ರಾಜಶೇಖರ ವಾಲಿ, ಜಂಬಣ್ಣ ಕುರ್ತಕೋಟಿ, ಹನುಮಪ್ಪ ತಳವಾರ, ಪಾರವ್ವ ಸರಗಣಾಚಾರಿ, ಮಂಜುನಾಥ ಜಂಗಣ್ಣವರ, ದೀಲಿಪಕುಮಾರ ದೊಡ್ಡಮೇಟಿ, ಮುಖಂಡ ಶೇಖಪ್ಪ ಮಾರನಬಸರಿ, ಕಾರ್ಯದರ್ಶಿ ಕಾಶಪ್ಪ ಗಾಣಿಗೇರ, ಸಹಾಯಕ ಜಗದೀಶ ಮೆಣಸಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here