ಯೋಜನೆಗಳ ಸದುಪಯೋಗವಾಗಲಿ : ಡಾ. ಚಂದ್ರು ಲಮಾಣಿ

0
3 Distribution of battery operated wheel chairs
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಕಲಚೇತನರಿಗೆ ಹಾಗೂ ಅಂಗವಿಕಲರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

Advertisement

ಅವರು ಪಟ್ಟಣದ ಜಗದ್ಗುರು ರಂಭಾಪುರಿ ವೀರಗಂಗಾಧರ ಸಮುದಾಯ ಭವನದ ಆವರಣದಲ್ಲಿ ರಾಜ್ಯ ಸರಕಾರ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಗದಗ ಇವರು ಕೊಡಮಾಡಿದ 17 ಯಂತ್ರಚಾಲಿತ ತ್ರಿಚಕ್ರವಾಹನ, 3 ಬ್ಯಾಟರಿ ಚಾಲಿತ ವೀಲ್ ಚೇರ್ ವಿತರಣೆ ಮಾಡಿ ಮಾತನಾಡಿದರು.

ಅಂಗವಿಕಲರು, ಹಿರಿಯರು ಸ್ವಾವಲಂಬಿಯಾಗಿ ಜೀವನ ನಡೆಸಬೇಕು ಎಂಬುದು ಯೋಜನೆ ಉದ್ದೇಶವಾಗಿದೆ. ಇವುಗಳನ್ನು ಬಳಸಿಕೊಂಡು ಉತ್ತಮ ಜೀವನ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಹಾಂತೇಶ ಕುರಿ, ತಹಸೀಲ್ದಾರ ವಾಸುದೇವ ಸ್ವಾಮಿ, ಶಿರಹಟ್ಟಿ ತಹಸೀಲ್ದಾರ ಅನಿಲ್ ಬಡಿಗೇರ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಪುರಸಭೆ ಸದಸ್ಯ ಪ್ರವೀಣ ಬಾಳಿಕಾಯಿ, ಎಮ್‌ಆರ್‌ಡಬ್ಲ್ಯೂ ಭಾರತಿ ಮೂರಶಿಳ್ಳಿ, ಯುಆರ್‌ಡಬ್ಲ್ಯೂ ಮಂಜುನಾಥ ರಾಮಗೇರಿ, ವನಜಾಕ್ಷಿ ಹಾಲಗಿಮಠ, ನಾಗಪ್ಪ ಅಣ್ಣಿಗೇರಿ, ನಾಮದೇವ ಲಮಾಣಿ ಸೇರಿದಂತೆ ಮೂರೂ ತಾಲೂಕಿನ ಗ್ರಾ.ಪಂ ವಿಆರ್‌ಡಬ್ಲ್ಯೂ ಅವರು ಇದ್ದರು.


Spread the love

LEAVE A REPLY

Please enter your comment!
Please enter your name here