ಸಹಕಾರ ಸಂಘಗಳು ಕೃಷಿಕರ ಜೀವನಾಡಿ : ಬಸವರಾಜ ಹೊಸಮನಿ

0
One Day Special Cooperative Training Camp
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಸಹಕಾರ ಇಲಾಖೆ, ಹಾಗೂ ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಟಿ.ಎ.ಪಿ.ಸಿ.ಎಂ.ಎಸ್.ಲಿ., ಮುಂಡರಗಿ ಹಾಗೂ ಮುಂಡರಗಿ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರವನ್ನು ಕೆ.ಸಿ.ಸಿ ಬ್ಯಾಂಕ್ ಸಭಾಭವನದಲ್ಲಿ ಶುಕ್ರವಾರ ಜರುಗಿತು.

Advertisement

ಕಾರ್ಯಕ್ರಮವನ್ನು ಉದ್ಘಾಟಿಸಿದ ಧಾರವಾಡ ಕೆ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಎಸ್.ಪಾಟೀಲ ಮಾತನಾಡಿ, ಪ್ಯಾಕ್ಸ್ಗಳನ್ನು ಬಹುಸೇವಾ ಕೇಂದ್ರಗಳಾಗಿ ರೂಪಿಸುವುದರ ಜೊತೆಗೆ ಗಣಕೀಕರಣ ವ್ಯವಸ್ಥೆ, ಸಾಮಾನ್ಯ ಸೇವಾ ಕೇಂದ್ರಗಳಲ್ಲಿಯ ಸೌಲಭ್ಯಗಳನ್ನು ಅಳವಡಿಸಿಕೊಂಡು ಸಹಕಾರಿಗಳಿಗೆ ಅನುವು ಮಾಡಿಕೊಡುವುದು ಅತೀ ಅವಶ್ಯ. ರಾಷ್ಟçದ 8.5 ಲಕ್ಷ ಸಹಕಾರ ಸಂಸ್ಥೆಗಳ ಮಾಹಿತಿಗಳನ್ನು ಕ್ರೋಢೀಕರಿಸಿ ಮಾಹಿತಿ ಕಣಜವನ್ನಾಗಿ (ಡೇಟಾ ಬೇಸ್ ಸೆಂಟರ್) ಮಾಡಿರುವುದು, ರಾಷ್ಟ್ರೀಯ ಮಟ್ಟದಲ್ಲಿ ಸಾವಯವ ಸಹಕಾರ ಸಂಸ್ಥೆ, ರಫ್ತು ಸಹಕಾರ ಸಂಸ್ಥೆ ಮತ್ತು ಬಿತ್ತನೆ ಬೀಜ ಸಹಕಾರ ಸಂಸ್ಥೆಗಳನ್ನು ಹುಟ್ಟುಹಾಕಿರುವುದು ವಿಶೇಷವಾಗಿದೆ.

ಪ್ರಸ್ತುತ ಅವಧಿಯಲ್ಲಿರುವ ಕೆ.ಸಿ.ಸಿ. ಬ್ಯಾಂಕುಗಳ ಸಂಖ್ಯೆ 52 ಇದ್ದು, ಪ್ರತಿ 10 ಸಾವಿರ ಜನಸಂಖ್ಯೆಯುಳ್ಳ ಗ್ರಾಮಕ್ಕೆ 3 ಪ್ಯಾಕ್ಸ್ ಸಂಘಗಳ ನಡುವೆ ಒಂದರಂತೆ ಕೆ.ಸಿ.ಸಿ. ಬ್ಯಾಂಕಿನ ನೂತನ ಶಾಖೆಯನ್ನು ಪ್ರಾರಂಭಿಸುವ ಉದ್ದೇಶವನ್ನು ಮುಂದಿನ 5 ವರ್ಷಗಳ ಅವಧಿಯಲ್ಲಿ ಯೋಜನೆಯಲ್ಲಿ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಬಸವರಾಜ ವಾಯ್.ಹೊಸಮನಿ ಮಾತನಾಡಿ, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕೃಷಿ ವಲಯ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತಿದೆ. ಇನ್ನು ಕೃಷಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಜೀವನಾಡಿಗಳಾಗಿವೆ. ಈ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಮಟ್ಟದಲ್ಲಿ ಸದಸ್ಯರಿಗೆ ಬ್ಯಾಂಕಿಂಗ್ ಸೇರಿದಂತೆ ಬಹುವಿಧ ಸೇವೆಯನ್ನು ನಿಡುವುದಲ್ಲದೇ, ಕೃಷಿ ಸಂಬಂಧಿತ ಸಾಲಗಳನ್ನು ನೀಡುವುದರಲ್ಲಿ ಮಂಚೂಣಿಯಲ್ಲಿವೆ ಎಂದರು.

ಪಿಕಾರ್ಡ ಬ್ಯಾಂಕಿನ ಅಧ್ಯಕ್ಷ ಹಾಲಪ್ಪ ಆರ್.ಕಬ್ಬೇರಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಎಂ.ಎಸ್. ಪಾಟೀಲ, ಯೂನಿಯನ್ ನಿರ್ದೇಶಕರಾದ ಶಿದ್ಧನಗೌಡ ಬಿ.ಪಾಟೀಲ, ಯಂಕಪ್ಪ ಎಲ್.ಹುಳಕಣ್ಣವರ, ಎಸ್.ಎಂ. ಅಂಕದ ಉಪಸ್ಥಿತರಿದ್ದರು.

ತರಬೇತಿ ಕಾರ್ಯಾಗಾರದಲ್ಲಿ ಕೆ.ಬಿ. ದೊಡ್ಡಮನಿ, ಎಸ್.ವ್ಹಿ. ಪಾಟೀಲ ಉಪನ್ಯಾಸ ನೀಡಿದರು.
ಮುಂಡರಗಿ ಕೆ.ಸಿ.ಸಿ. ಬ್ಯಾಂಕಿನ ಸಿಬ್ಬಂದಿ ಹೀನಾ ಅಳವುಂಡಿಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್.ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ಯೂನಿಯನ್‌ನ ಮಹಿಳಾ ಸಹಕಾರ ಶಿಕ್ಷಕಿ ರಶೀದಾಬಾನು ಸಿ.ಯಲಿಗಾರ ವಂದಿಸಿದರು.

ಬರದೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಮೇಶಗೌಡ ಹಿರೇಗೌಡ್ರ ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಘಗಳು ಕ್ರೀಯಾಶೀಲ ಸೇವೆ ಸಲ್ಲಿಸುತ್ತಿವೆ. ಪ್ಯಾಕ್ಸಗಳಲ್ಲಿ 13 ಕೋಟಿಗೂ ಮೀರಿ ಸದಸ್ಯರಿದ್ದು, ಈ ಅಂಕಿ-ಅಂಶ ನಮಗೆ ಕೃಷಿ ಪತ್ತಿನ ಸಂಘಗಳ ಅಗತ್ಯತೆಯನ್ನು ವಿವರಿಸುತ್ತದೆ. 100ರಿಂದ 5000 ಸದಸ್ಯರುಗಳನ್ನು ಹೊಂದಿರುವ ಈ ಸಂಘಗಳು ತಾಲೂಕು ಮಟ್ಟಕ್ಕಿಂತ ಕಡಿಮೆ ಕಾರ್ಯವ್ಯಾಪ್ತಿ ಹೊಂದಿದ್ದು, ಗ್ರಾಮೀಣ ರೈತಾಪಿ ಜನರ ಅವಿಭಾಜ್ಯ ಅಂಗವಾಗಿವೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here