ಹುಬ್ಬಳ್ಳಿ: ದೀಪಾವಳಿ ಹಬ್ಬದೊಳಗೆ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹೊಸ ಸಿಎಮ್, ಹೊಸ ಸರ್ಕಾರನಾ ಅಂದ್ರೆ ಕಾಲ ನಿರ್ಣಯ ಮಾಡುತ್ತದೆ. ಸಿದ್ದರಾಮಯ್ಯ ರಾಜೀನಾಮೆಗೆ ಕಾಂಗ್ರೆಸ್ ಮುಹೂರ್ತ ನಿಗದಿ ಮಾಡಿದೆ. ಹೊರಗಡೆ ಸಿದ್ದರಾಮಯ್ಯ ಅವರ ಹಿಂದೆ ಬಂಡೆಯಂತೆ ನಿಂತಿದಿವಿ ಅಂತಾರೆ. ಸಿದ್ದರಾಮಯ್ಯ ಹೋಗೋದು ಫಿಕ್ಸ್ ಆಗಿದ್ದು,
ಹೀಗಾಗಿ ಕಾಂಪಿಟೇಶನ್ ಶುರುವಾಗಿದೆ. ಒಂದು ಡಜನ್ ಗೆ ಹೆಚ್ಚು ಜನ ಆಕಾಂಕ್ಷಿಗಳಾಗಿದ್ದಾರೆ. ಸಿಎಂ ಸಂಗೊಳ್ಳಿ ರಾಯಣ್ಣ ಪಿತೂರಿಗೆ ಬಲಿಯಾಗಿದ್ದಾರೆ ಎಂದಿದ್ದರು.
ನೀವು ಸಂಗೊಳ್ಳಿ ರಾಯಣ್ಣ ಅಂತಾ ನಾನು ಭಾವಿಸಲ್ಲ ಎಂದರು. ಸರ್ಕಾರದಲ್ಲಿ ಹಗರಣ ನಡೆದಿರೋದು ಸ್ಪಷ್ಟ. ಸರ್ಕಾರದಲ್ಲಿ ಬರೀ ಹಗರಣಗಳೇ ಸುದ್ದಿ. ಇದು ಬ್ರಷ್ಟಾಚಾರದ ಸರ್ಕಾರ. ಉಪ್ಪು ತಿಂದವರು ನೀರು ಕುಡಿಯಲಬೇಕು. ಕಳ್ಳನ ಹೆಂಡತಿ ಡ್ಯಾಶ್ ಡ್ಯಾಶ್ ಎಂದು ಸಿ.ಟಿ. ರವಿ ಗುಡುಗಿದರು.