ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಪ್ರೀಮಿಯರ್ ಲೀಗ್-2024ರ ಆವೃತ್ತಿ ಲೆದರ್ ಬಾಲ್ ಕ್ರಿಕೆಟ್ ಆರಂಭವಾಗಲಿದ್ದು, ಸೆಪ್ಟೆಂಬರ್ 11ನೇ ತಾರೀಖು ನೋಂದಣಿ ಮಾಡಿಸಿ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ ಎಂದು ಜಿಪಿಎಲ್ ಕಮಿಟಿಯ ಸದಸ್ಯರು ತಿಳಿಸಿದ್ದಾರೆ. ನೋಂದಣಿ ಮಾಡಿಸಲು ಶಿವರಾಜ ಕರಡಿ (9886360438) ಮತ್ತು ಅಸ್ಲಂ ಮುಧೋಳ (9886360438) ಅವರನ್ನು ಸಂಪರ್ಕಿಸಬೇಕು.
ಜಿ.ಪಿ.ಎಲ್ ಕ್ರಿಕೆಟ್ ಲೀಗ್ ಗದಗ ಜಿಲ್ಲೆಯ ಕ್ರಿಕೆಟ್ ಕ್ರೀಡಾಪಟುಗಳಿಗೆ ಸೀಮಿತವಾಗಿರುತ್ತದೆ. ಇದು ಆಕ್ಷನ್ ಬೇಸ್ಡ್ ಕ್ರಿಕೆಟ್ ಲೀಗ್ ಆಗಿರುತ್ತದೆ. ಇದೇ ತಿಂಗಳು ಕೊನೆಯ ವಾರದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಹಾಗೂ ಅಕ್ಟೋಬರ್ ತಿಂಗಳಲ್ಲಿ ಜಿ.ಪಿ.ಎಲ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗುತ್ತದೆ ಎಂದು ಜಿ.ಪಿ.ಎಲ್. ಕಮಿಟಿ ಸದಸ್ಯರು ತಿಳಿಸಿದ್ದಾರೆ.
ಜಿಲ್ಲೆಯ ಕ್ರಿಕೆಟ್ ಪಟುಗಳು ಆದಷ್ಟು ಬೇಗ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿ ಅರ್ಜಿ ಸಲ್ಲಿಸಬೇಕು. ಗದಗ ಜಿಲ್ಲೆಯಲ್ಲಿ ಲೆದರ್ ಬಾಲ್ ಕ್ರಿಕೆಟ್ ಕ್ರೀಡೆಯನ್ನು ಬೆಳೆಸಲು ಇದು ಒಂದು ಸದಾವಕಾಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.