ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮಾಜದಲ್ಲಿ ಯಾರು ಸನ್ಮಾರ್ಗದಲ್ಲಿ ನಡೆಯುತ್ತಾರೋ ಅವರಿಗೆ ಸನ್ಮಾನಗಳು ಕಟ್ಟಿಟ್ಟ ಬುತ್ತಿ. ಕಾಯಾ, ವಾಚಾ, ಮನಸ್ಸಿನಿಂದ ಯಾರು ಸಮಾಜ ಸೇವೆಗಳನ್ನು ಮಾಡುತ್ತಾರೆಯೋ ಅವರು ಎಂದಿಗೂ ಸಮಾಜದಲ್ಲಿ ಗೌರವಾನ್ವಿತರಾಗಿರುತ್ತಾರೆ. ಇಂಥವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚುಹೆಚ್ಚಾಗಿ ತೊಡಗಿಕೊಳ್ಳುವದರಿಂದ ಅವರಲ್ಲಿನ ಆಧ್ಯಾತ್ಮಿಕ ಶಕ್ತಿಯೂ ಹೆಚ್ಚಾಗುತ್ತದೆ ಎಂದು ಸಿದ್ದರಬೆಟ್ಟ ಮತ್ತು ಅಬ್ಬಿಗೇರಿ ಹಿರೇಮಠದ ಷ. ಬ್ರ. ಶ್ರೀ ವೀರಭದ್ರ ಶಿವಾಚಾರ್ಯರು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕರ್ನಾಟಕ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡ ಮಿಥುನ್ ಪಾಟೀಲ ಅವರನ್ನು ಹಿರೇಮಠದಲ್ಲಿ ಸನ್ಮಾನಿಸಿ ಅವರು ಆಶೀರ್ವಚನ ನೀಡಿದರು.
ಸತ್ಕಾರ್ಯಗಳು ಮಾನವನನ್ನು ಪರಿಶುದ್ಧಗೊಳಿಸುತ್ತವೆ. ಸಮಾಜ ಸೇವೆ ಮಾಡಲು ಅಧಿಕಾರ ಮುಖ್ಯವಲ್ಲ. ಅಧಿಕಾರ ಶಾಶ್ವತವೂ ಅಲ್ಲ. ಅಧಿಕಾರ ಇರಲಿ, ಇಲ್ಲದಿರಲಿ ಸದಾಕಾಲ ಜನರ ಸೇವೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಎಲ್ಲ ಕಾಲದಲ್ಲಿಯೂ ನಿಸ್ವಾರ್ಥತೆಯಿಂದ ಸಮಾಜ ಸೇವೆ ಮಾಡುವವರನ್ನು ಸಮಾಜ ಎಂದಿಗೂ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ಶ್ರೀಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸೊರಟೂರಿನ ಷ. ಬ್ರ. ಶ್ರೀ ಫಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನಾಗವಂದ ಶ್ರೀಗಳು, ತಮ್ಮಡಿಹಳ್ಳಿ ಶ್ರೀಗಳು, ಸುರೇಶ ಬಸವರಡ್ಡೇರ, ಬಸವರಾಜ ಪಲ್ಲೇದ, ಎ.ವಿ. ವೀರಾಪೂರ, ವೀರನಗೌಡ ಪಾಟೀಲ, ಸೋಮನಗೌಡ ಕಣವಿ, ಜಗದೀಶ ಅವರೆಡ್ಡಿ, ಭರಮಪ್ಪ ಹನುಮನಾಳ, ಸಿದ್ದು ಹನುಮನಾಳ, ಮುತ್ತಪ್ಪ ಕುಕನೂರ, ಬಸವರಾಜ ಚವಡಿ, ಮಹಾದೇವಪ್ಪ ಕಂಬಳಿ, ಶಿವಪುತ್ರಪ್ಪ ತೆಗ್ಗಿನಕೇರಿ, ಎ.ಕೆ. ಮಳಗಿ, ಸೋಮು ಶಿರೋಳ, ಕುಮಾರ ಬಸವರಡ್ಡೇರ, ಕುಮಾರ ಭೀಮನಗೌಡ್ರ, ಸಂಗಪ್ಪ ಕುಂಬಾರ, ಗುರುಲಿಂಗಪ್ಪ ಬಸವರಡ್ಡೇರ, ಚನ್ನಬಸು ಹೂಗಾರ, ಅಂದಪ್ಪ ಹಲಕುರ್ಕಿ, ಹರ್ಷ ಅವರೆಡ್ಡಿ, ಮುತ್ತಪ್ಪ ಅವರೆಡ್ಡಿ, ದೇವನಗೌಡ ಮುನೇನಕೊಪ್ಪ, ಮಂಜು ಆರಟ್ಟಿ ಮುಂತಾದವರು ಉಪಸ್ಥಿತರಿದ್ದರು.