ಲಕ್ಷ್ಮೇಶ್ವರ ಪೊಲೀಸರ ಭರ್ಜರಿ ಕಾರ್ಯಾಚರಣೆ: ದೇವಸ್ಥಾನ ದರೋಡೆ ಮಾಡ್ತಿದ್ದ ಸರಕಾರಿ ನೌಕರ ಸೇರಿ ಮೂವರು ಖದೀಮರು ಅಂದರ್

0
Spread the love

ಗದಗ: ದೇವಸ್ಥಾನಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಾಯಿದ್ದ ಕಿಲ್ಲರ್ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಗದಗ ಜಿಲ್ಲೆಯ ಪೊಲೀಸರು ಯಶ್ವಸ್ವಿಯಾಗಿದ್ದಾರೆ.

Advertisement

ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದ್ದು, ಎಸ್ಪಿ ಬಿ.ಎಸ್ ನೇಮಗೌಡ, ಬಾಗಲಕೋಟ ಎಸ್ಪಿ, ಗದಗ ಪ್ರಭಾರ ಎಸ್ಪಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್ಪಿ ಎಮ್ ಬಿ ಸಂಕದ,‌ ಡಿವೈಎಸ್ಪಿ ಜೆ.ಎಚ್ ಇನಾಮದಾರ‌ ಅವರ ನೇತೃತ್ವದಲ್ಲಿ ಲಕ್ಷ್ಮೇಶ್ವರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಗದಗ, ಹಾವೇರಿ , ವಿಜಯನಗರ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯಲ್ಲಿ ಕಳ್ಳತನ ಮಾಡ್ತಾಯಿದ್ದ ಗ್ಯಾಂಗ್ ಅನ್ನು ಅರೆಸ್ಟ್‌ ಮಾಡಿದ್ದಾರೆ. ಪ್ರಸಾದ & ಗುರುಪ್ರಸಾದ, ಪ್ರದೀಪ್, ಶ್ರೀಕಾಂತ, ಬಂಧಿತ ಆರೋಪಿಗಳಾಗಿದ್ದು,

ಅಂಬಾಭವಾನಿ ದೇವಸ್ಥಾನ, ಹೇಮಗಿರಿ ಮಠ ಬನ್ನಿಕೊಪ್ಪ, ದುರ್ಗಾದೇವಿ ಹಾಗೂ ಮಾರುತಿ ದೇವಸ್ಥಾನ, ಹೇಮಗಿರಿ ಚನ್ನಬಸವೇಶ್ವರ ಮಠ ಗುತ್ತಲ ಗ್ರಾಮ, ಶ್ರೀ ಬನಶಂಕರಿ ದೇವಿ ದೇವಸ್ಥಾನ ತುಮ್ಮಿನಕಟ್ಟ, ಗ್ರಾಮದೇವತೆ ದೇವಸ್ಥಾನ ನೀರಲಗಿ ಗ್ರಾಮ, ಶ್ರೀ ಬನಶಂಕರಿ ದೇವಿ ದೇವಸ್ಥಾನ ತುಮ್ಮಿನಕಟ್ಟೆ ಗ್ರಾಮ, ಹಾಲು ರಾಮೇಶ್ವರ ಗಂಗಮ್ಮ ದೇವಸ್ಥಾನ ಗೂಳಿ ಹೊಸಳ್ಳಿ ಗ್ರಾಮ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದರು.

ಜೊತೆಗೆ ಸರಗಳ್ಳತನ ಮಾಡಿರುವ ಬಗ್ಗೆಯೂ ಆರೋಪಿಗಳು ಬಾಯಿಬಿಟ್ಟಿದ್ದು, ಲಕ್ಷ್ಮೀಶ್ವರ ಶಹರ, ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮ, ಗದಗ ಶಹರ, ವಿಜಯನಗರ ಜಿಲ್ಲೆಯ ಕೊಟ್ಟೂರ, ಹರಪನಹಳ್ಳಿ, ಶಿವಮೊಗ್ಗ ಜಿಲ್ಲೆಯ ಆನವಟ್ಟಿ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗಾ ಶಹರದಲ್ಲಿ ಸರಗಳ್ಳತನ ಮಾಡಿದ್ದಾರೆ.

ಕಳ್ಳರ ಗ್ಯಾಂಗ್ ಕಿಂಗ್ ಪಿನ್ ಶ್ರೀಕಾಂತ್ ಜೈಲು ವಾರ್ಡನ್ ಆಗಿದ್ದು, ಜೈಲಿನಲ್ಲಿ ಪರಿಚಯವಾದ ಕಳ್ಳರ ಗ್ಯಾಂಗ್ ಇಟ್ಟುಕೊಂಡು ಶ್ರೀಕಾಂತ್ ಗುಡಗೂರು, ದೇವಸ್ಥಾನವನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಅದಲ್ಲದೆ ಕಳ್ಳತನ ಮಾಡಿದ ಸ್ವತ್ತು ಹಂಚಿಕೊಳ್ಳುವ ವಿಷಯದಲ್ಲಿ ಗಲಾಟೆಯಾಗಿ ರಮೇಶನ್ನು ಎಂಬಾತನನ್ನು ಕೊಲೆ ಮಾಡಿದ್ದಾರೆ.

ಲಕ್ಷ್ಮೇಶ್ವರದಲ್ಲಿ ನಡೆದ ಕಳ್ಳತನದ ಸಿಸಿ ಟಿವಿ ದೃಶ್ಯ ಬೆನ್ನತ್ತಿ ಕಳ್ಳರನ್ನು ಬಂಧಿಸಿ ವಿಚಾರಣೆ ಮಾಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂಧಿದ್ದು, ಆರೋಪಿಗಳಿಂದ 46 ಲಕ್ಷ ಮೌಲ್ಯದ ದೇವರ ಆಭರಣಗಳು ಹಾಗೂ ನಗದು, ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಒಟ್ಟು 15 ಪ್ರಕರಣಗಳು ಪೊಲೀಸರು ಬೇಧಿಸಿದ್ದಾರೆ ಎಂದು ಎಸ್ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಭಾರಿ ಎಸ್ಪಿ ಅಮರನಾಥ ರೆಡ್ಡಿ ಮಾಹಿತಿ ನೀಡಿದರು. ಇನ್ನೂ ಪ್ರಕರಣ ಭೇದಿಸಿದ ಶಿರಹಟ್ಟಿ ಸಿಪಿಐ ನಾಗರಾಜ್ ಮಾಡಳ್ಳಿ, ಲಕ್ಷ್ಮೇಶ್ವರ ಪಿಎಸ್ಐ ಈರಪ್ಪ ರಿತ್ತಿ, ಮಾರುತಿ ಜೋಗದಂಡಕರ್ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಬೆಳಗಾವಿ ಐಜಿಪಿ ಹಾಗೂ ಗದಗ ಎಸ್ಪಿ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here