ಕರ್ನಾಟಕದಲ್ಲಿ CM ಬದಲಾವಣೆ ಕೂಗು: ರಾಹುಲ್​ ಗಾಂಧಿಗೆ ಪತ್ರ ಬರೆದ ಪಕ್ಷದ ಹಿರಿಯ ನಾಯಕರು!

0
Spread the love

ಬೆಂಗಳೂರು :- ಕರ್ನಾಟಕದಲ್ಲಿ CM ಬದಲಾವಣೆ ಕೂಗು ಜೋರಾಗಿದ್ದು, ಈ ಮಧ್ಯೆ ರಾಹುಲ್ ಗಾಂಧಿಗೆ ಕಾಂಗ್ರೆಸ್ ನ ಹಿರಿಯ ಮುಖಂಡರು ಪತ್ರ ಬರೆದಿದ್ದಾರೆ.

Advertisement

ಮುಡಾ ಹಗರಣ ವಿಚಾರ ಕೋರ್ಟ್ ನಲ್ಲಿ ಇರುವಾಗಲೇ ಕೆಲವು ಶಾಸಕರು, ಸಚಿವರು ಸಿಎಂ ಬದಲಾವಣೆ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನಲೆ ಸಚಿವರಿಗೆ ಕಡಿವಾಣ ಹಾಕುವಂತೆ 15ಕ್ಕೂ ಹೆಚ್ಚು ಕಾಂಗ್ರೆಸ್​​ನ ನಾಯಕರು ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ನಾವು ಹೋರಾಡಬೇಕಾಗಿರುವುದು ಬಿಜೆಪಿ-JDS ವಿರುದ್ಧ, ಆದರೆ ಬಿಜೆಪಿ-JDS ವಿರುದ್ಧ ಹೋರಾಡುವುದನ್ನು ಮರೆತಿದ್ದಾರೆ. ಅದರ ಬದಲು ಸಚಿವರಿಂದ ಸಿಎಂ ಸ್ಥಾನದ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಕಾರ್ಯಕರ್ತರು, ಜನರಿಗೆ ನಮ್ಮ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಹೋಗುತ್ತಿದೆ.

ಕೂಡಲೇ ಸಚಿವರಿಗೆ ಸೂಚಿಸಿ ಗೊಂದಲಕಾರಿ ಹೇಳಿಕೆಗೆ ಕಡಿವಾಣ ಹಾಕಿ ಎಂದು ರಾಹುಲ್ ಗಾಂಧಿಗೆ ಬಿ.ಎಲ್.ಶಂಕರ್, ವಿ.ಎಸ್.ಉಗ್ರಪ್ಪ, ಬಿ.ಎನ್.ಚಂದ್ರಪ್ಪ, ಎಲ್.ಹನುಮಂತಯ್ಯ, ರಾಣಿ ಸತೀಶ್, ವಿ.ಆರ್.ಸುದರ್ಶನ್, H.M.ರೇವಣ್ಣ, H.D.ಅಮರನಾಥ್, ಸಿ.ಎಸ್.ದ್ವಾರಕನಾಥ್, ಪಿ.ಆರ್.ರಮೇಶ್ ಸೇರಿದಂತೆ ಪ್ರಮುಖ ನಾಯಕರೇ ರಾಹುಲ್​ ಅವರಿಗೆ ಪತ್ರ ಬರೆದಿದ್ದಾರೆ.


Spread the love

LEAVE A REPLY

Please enter your comment!
Please enter your name here