ವಿಜಯಸಾಕ್ಷಿ ಸುದ್ದಿ, ಗದಗ : ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಕೆ. ಪಾಟೀಲರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ರಾಜ್ಯ ಅಧ್ಯಕ್ಷರಾದ ಜನಾಬ ಹೆಚ್.ಜಲೀಲ್ ಸಾಬರವರ ಉಸ್ತುವಾರಿಯಲ್ಲಿ ಗದಗ ಜಿಲ್ಲೆಯ ಅಧ್ಯಕ್ಷ ಜನಾಬ ಕೆ.ಎಫ್. ಹಳ್ಯಾಳ ಹಾಗೂ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಅಕ್ಟೋಬರ್ 27ರಂದು ಗದಗದಲ್ಲಿ ನಡೆಯಲಿರುವ 32ನೇ ಸಂಸ್ಥಾಪನಾ ದಿನಾಚರಣೆಗೆ ಆಗಮಿಸಲು ಆಹ್ವಾನಿಸಿದರು. ಜನಾಬ ಫಕರುಸಾಬ ನದಾಫ್ ಕುರ್ತಕೋಟಿ ಮತ್ತು ಕೆ.ಎಫ್ ಹುಲಕೋಟಿ (ರಬ್ಬಾನಿ) ಸಿಎಂ ಮತ್ತು ಸಚಿವರ ಭೇಟಿ ಪ್ರಕ್ರಿಯೆ ಕಾರ್ಯವನ್ನು ಯಶಸ್ವಿಯಾಗಿಸಿದರು.
ಈ ಸಂದರ್ಭದಲ್ಲಿ ರಾಜ್ಯಧ್ಯಕ್ಷ ಜನಾಬ ಹೆಚ್.ಜಲೀಲಸಾಬ, ರಾಜ್ಯ ಉಪಾಧ್ಯಕ್ಷ ಜನಾಬ ಜಿ.ಡಿ. ನದಾಫ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜನಾಬ ರಿಯಾಜ ಸಲೀಮ್ ನಾಗ್ತೇ, ರಾಜ್ಯ ಖಜಾಂಚಿ ಜನಾಬ ಶಾಬುದ್ದಿನ ನೂರಾಬಾಷ, ಬೆಂಗಳೂರು ವಿಭಾಗೀಯ ವಿಭಾಗದ ಉಪಾಧ್ಯಕ್ಷ ಎಂ.ಡಿ. ಮುನಾಫ, ಗದಗ ಜಿಲ್ಲಾ ಅಧ್ಯಕ್ಷ ಜನಾಬ ಕೆ.ಎಫ್. ಹಳ್ಯಾಳ, ಬೆಂಗಳೂರು ಜಿಲ್ಲಾ ಅಧ್ಯಕ್ಷ ಮಹಮ್ಮದ ರಫಿ, ರಾಜ್ಯ ಸಮಿತಿ ಸದಸ್ಯ ಜನಾಬ ಶರೀಫಸಾಬ ನೂರಾಬಾಷ, ಗದಗ ಜಿಲ್ಲಾ ಕಾರ್ಯದರ್ಶಿ ಎಂ.ಬಿ. ನದಾಫ್ ವಕೀಲರು, ಗದಗ ಜಿಲ್ಲಾ ಸಹಕಾರ್ಯದರ್ಶಿ ಹುಸೇನಸಾಬ ನದಾಫ್ (ಮೌಲಾ), ಗದಗ ಜಿಲ್ಲಾ ಕೋಶಾಧ್ಯಕ್ಷ ಜನಾಬ ಶೌಕತ್ ಅಲಿ ಎಂ.ಅಣ್ಣಿಗೇರಿ, ಗದಗ-ಬೆಟಗೇರಿ ಶಹರ ಆಡಳಿತ ಮಂಡಳಿ ಸದಸ್ಯ ಕೆ.ಎಫ್. ಹುಲಕೋಟಿ( ರಬ್ಬಾನಿ) ಶಹರ ಘಟಕದ ಕಾರ್ಯದರ್ಶಿ ಜನಾಬ ಜಾಕಿರ್ ಬಾಗಲಕೋಟ, ಶಹರ ಸಂಘಟನಾ ಕಾರ್ಯದರ್ಶಿ ಮಹಮ್ಮದ್ ರಫೀಕ ಅಣ್ಣಿಗೇರಿ, ಗದಗ ತಾಲೂಕಾ ಗ್ರಾಮೀಣ ಉಪಾಧ್ಯಕ್ಷ ಜನಾಬ ಫಕರುಸಾಬ ನದಾಫ, ಉಪಾಧ್ಯಕ್ಷ ಜನಾಬ ರಾಜೇಸಾಬ ಶಿಶ್ವಿನಹಳ್ಳಿ ಉಪಸ್ಥಿತರಿದ್ದರು.