ವಿಜಯಸಾಕ್ಷಿ ಸುದ್ದಿ, ಡಂಬಳ : ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ನಿಮಿತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವಾಯ್‌ಎಸ್‌ಪಿ ಅವರ ಮಾರ್ಗದರ್ಶನದಡಿ ಮುಂಡರಗಿ ಸಿಪಿಐ ಮಂಜುನಾಥ ಕುಸಗಲ್ ನೇತೃತ್ವದಲ್ಲಿ ಗ್ರಾಮದ ವಿವಿಧ ರಸ್ತೆಗಳಲ್ಲಿ ಪಥ ಸಂಚಲನ (ರೂಟ್ ಮಾರ್ಚ್) ನಡೆಸಿದರು.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಶಾಂತಿ-ಸೌಹಾರ್ಧತೆಯಿಂದ ಹಬ್ಬಗಳನ್ನು ಆಚರಿಸುವಂತಾಗಬೇಕು. ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಪೊಲೀಸ್ ಪಡೆಯ ಸಿದ್ಧತೆಯನ್ನು ಪ್ರದರ್ಶಿಸಲು ಪೊಲೀಸ್ ಪಡೆಯಿಂದ ಜನಸ್ನೆಹಿ ಭಾಗವಾಗಿ ಪೊಲೀಸ್ ವರಿಷ್ಠಾಧಿಕಾರಿ, ಡಿವಾಯ್‌ಎಸ್‌ಪಿ ಅವರ ಮಾರ್ಗದರ್ಶನದಂತೆ ಮುಂಡರಗಿ ಸಿಪಿಐ ಮಂಜುನಾಥ ಕುಸಗಲ್ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಿದರು.
ಪೊಲೀಸ್ ಠಾಣೆಯಿಂದ ಹೊರಟ ಪಥಸಂಚನಲ ಮುಖ್ಯ ಬಜಾರನಿಂದ ಚಾವಾಡಿ ಮಾರ್ಗವಾಗಿ ಗ್ರಾಮ ಪಂಚಾಯಿತಿ ಮುಂಭಾಗವಾಗಿ ವಿವಿಧ ಬಡಾವಣೆಗಳ ಮೂಲಕ ಸಾಗಿತು. ಡಂಬಳ ಎಎಸ್‌ಐ ವೀರಣ್ಣ ತಂಟ್ರಿ, ಬಸುರಾಜ ಬಣಕಾರ, ಪೊಲೀಸ್ ಸಿಬ್ಬಂದಿವರ್ಗದವರು ಇದ್ದರು.