ವಿಜಯಸಾಕ್ಷಿ ಸುದ್ದಿ, ಗದಗ : ಅನ್ನದಾತರ ಕಷ್ಟಗಳನ್ನು ದೂರ ಮಾಡುವಂತೆ ಹಾಗೂ ಲೋಕ ಕಲ್ಯಾಣಕ್ಕಾಗಿ ಗೋಪೂಜೆ ಮಾಡಲಾಗಿದೆ ಎಂದು ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿಯ ಅಧ್ಯಕ್ಷ ತಿಮ್ಮರೆಡ್ಡಿ ಎಚ್.ಕೋನರೆಡ್ಡಿ ಹೇಳಿದರು.
ಅವರು ನಗರದ ಎ.ಪಿ.ಎಂ.ಸಿ ಯಾರ್ಡ್ನಲ್ಲಿ ದಲಾಲ ವರ್ತಕರ ಸಂಘ, ಖರೀದಿದಾರರ ಸಂಘ, ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶನಿಗೆ 1001 ಮೋದಕ ಪೂಜೆ, 101 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಜೊತೆಗೆ ಗೋಪೂಜೆ ನೆರವೇರಿಸಿ ಮಾತನಾಡಿದರು.
ಗೋಮಾತೆಯ ಉದರದಲ್ಲಿ ಮುಕ್ಕೋಟಿ ದೇವರು ನೆಲೆಸಿರುತ್ತಾರೆ ಎಂದು ವೇದ-ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ ಕೋಟಿ ದೇವರನ್ನು ಪೂಜಿಸುವದಕ್ಕಿಂತ ಗೋಮಾತೆಯನ್ನು ಪೂಜಿಸುವದರಿಂದ ಪುಣ್ಯ ಲಭಿಸುವದರ ಜೊತೆಗೆ ಗೋಮಾತೆ ತೃಪ್ತಳಾದರೆ ರೈತರ ಕಷ್ಟಗಳು ದೂರವಾಗಿ ಮಳೆ, ಬೆಳೆ ಸಮೃದ್ಧವಾಗುತ್ತದೆ ಎಂದು ನಂಬಿದವರು ನಾವು. ರೈತರ ಫಸಲು ಚೆನ್ನಾಗಿ ಬಂದರೆ ವರ್ತಕರ ವ್ಯವಹಾರಗಳು ಚೆನ್ನಾಗಿ ನಡೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿಯ ಗೌರವ ಅಧ್ಯಕ್ಷ ಪ್ರಮೋದ ವಾರಕರ, ಕಾರ್ಯದರ್ಶಿ ರಾಜಶೇಖರ ಮುಧೋಳ, ಉಪಾಧ್ಯಕ್ಷ ರಾಜು ಮೂಲಿಮನಿ, ಚಂದ್ರಕಾಂತ ಸವದತ್ತಿ, ಮಹೇಶ ಗಾಣಗೇರ, ನೀತಿಶ ವಾಲಿ, ಶೇಖಣ್ಣ ಗದ್ದಿಕೇರಿ, ವಸಂತಗೌಡ ಪೊಲೀಸ್‌ಪಾಟೀಲ, ರಾಜು ಗುಡಿಮನಿ, ವಿನಾಯಕ ವಜ್ರೇಶ್ವರಿ, ವಿವೇಕಾನಂದ ಗುಡಿಮನಿ, ಕೊಟ್ರೇಶ ಬಾಳಿಕಾಯಿ, ಗಿರೀಶ ಅಳವಂಡಿ, ದಯಾನಂದ ದುಂಡಪ್ಪನವರ, ವಿನಯ ಕಾಡಪ್ಪನವರ, ಸಾಗರ ವಜ್ರೇಶ್ವರಿ, ಮುತ್ತಣ್ಣ ಅಂಗಡಿ, ಅಜೀತ ಪುಣೇಕರ, ಮಂಜುನಾಥ ಕವಲೂರ, ಹಾಗೂ ದಲಾಲ ವರ್ತಕರ ಸಂಘ ಮತ್ತು ಖರೀದಿದಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.