ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಎ.ಪಿ.ಎಂ.ಸಿ ಯಾರ್ಡ್ನಲ್ಲಿ ದಲಾಲ ವರ್ತಕರ ಸಂಘ, ಖರೀದಿದಾರರ ಸಂಘದ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶನಿಗೆ ಬುಧವಾರ ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ, ವಿ.ಪ ಸಭಾಪತಿ ಬಸವರಾಜ ಹೊರಟ್ಟಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ಅಧ್ಯಕ್ಷ ತಿಮ್ಮಣ್ಣ ಕೋನರೆಡ್ಡಿ, ಗೌರವ ಅಧ್ಯಕ್ಷ ಪ್ರಮೋದ ವಾರಕರ, ಕಾರ್ಯದರ್ಶಿ ರಾಜಶೇಖರ ಮುಧೋಳ, ಉಪಾಧ್ಯಕ್ಷ ರಾಜು ಮೂಲಿಮನಿ, ಸಹ ಕಾರ್ಯದರ್ಶಿ ಚಂದ್ರಕಾಂತ ಸವದತ್ತಿ, ಖಜಾಂಚಿ ಮಹೇಶ ಗಾಣಗೇರ, ಸಹ ಖಜಾಂಚಿ ನೀತಿಶ ವಾಲಿ, ವಿನಾಯಕ ವಜ್ರೇಶ್ವರಿ, ವಿವೇಕಾನಂದ ಗುಡಿಮನಿ, ಕೊಟ್ರೇಶ ಬಾಳಿಕಾಯಿ, ಗಿರೀಶ ಅಳವಂಡಿ, ದಯಾನಂದ ಗುಂಡಪ್ಪನವರ, ವಿನಯ ಕಾಡಪ್ಪನವರ, ಶೇಖಣ್ಣ ಗದ್ದಿಕೇರಿ, ಮುರಗೇಶ ಬಡ್ನಿ, ಮಹಾದೇವಪ್ಪ ಗೌರಿಪುರ, ಪುಂಡಲೀಕಪ್ಪ ಕಂಬಿ, ಪ್ರಕಾಶ ಖೋಡೆ, ಅಶೋಕ ಗಡಾದ, ಬಿ.ಬಿ. ಅಸೂಟಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ ಪಾಟೀಲ, ಅಶೋಕ ಮಂದಾಲಿ, ಪಾರೂಕ್ ಹುಬ್ಬಳ್ಳಿ, ಸಾಗರ ವಜ್ರೇಶ್ವರಿ, ಮುತ್ತಣ್ಣ ಅಂಗಡಿ, ಅಜೀತ ಪುಣೇಕರ, ಮಂಜುನಾಥ ಕವಲೂರ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.