ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಗದಗ ಜಿಲ್ಲಾ ಸಮಿತಿ ಸ್ಥಾಪನೆಗೊಂಡು 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ `ಬೆಳ್ಳಿ ಮಹೋತ್ಸವ’ ಆಚರಣೆ ಮತ್ತು 2024ನೇ ಸಾಲಿನ 20ನೇ ವರ್ಷದ ಗಜಾನನೋತ್ಸವ ಕಾರ್ಯಕ್ರಮವನ್ನು 5 ದಿನಗಳ ಕಾಲ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗದಗ ಜಿಲ್ಲಾ ಸಮಿತಿ ಅಧ್ಯಕ್ಷ ಮಲ್ಲಪ್ಪ ಎಸ್.ಕಿಂದ್ರಿ, ಶಿವಾನಂದ ಪಾಟೀಲ, ಪ್ರವೀಣ ಗ್ಯಾನಪ್ಪನವರ, ಕುಮಾರಗೌಡ ಪಾಟೀಲ, ನಾರಾಯಣ ಶಿವರಡ್ಡಿ, ಪ್ರಭು ದೇಸಾಯಿಮಠ ಸೇರಿದಂತೆ ಸಂಘದ ಗದಗ ಜಿಲ್ಲಾ ಸಮಿತಿಯ ಎಲ್ಲ ಪದಾಧಿಕಾರಿಗಳು ಮತ್ತು ವಿದ್ಯುತ್ ಗುತ್ತಿಗೆದಾರರು ಉಪಸ್ಥಿತರಿದ್ದರು.