ಹುಬ್ಬಳ್ಳಿ:- ರಾಹುಲ್ ಗಾಂಧಿಯನ್ನು ಡಿಕೆಶಿ ಭೇಟಿ ಮಾಡಿರುವುದು ಸಿಎಂ ಆಗುವ ಉದ್ದೇಶದಿಂದ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಇಲ್ಲಿ ಮಾತಾಡಿದರೆ ಗೊತ್ತಾಗುತ್ತೆಂದು ಅಲ್ಲಿ ಭೇಟಿ ಆಗಿದ್ದಾರೆ. ಅದಕ್ಕೆ ಅಲ್ಲಿ ಒಂದು ಫೋಟೋ ಬಿಟ್ಟಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.
ವಿದೇಶದಲ್ಲಿ ರಾಹುಲ್ ಗಾಂಧಿಯಿಂದ ಅಪ್ರಬುದ್ಧ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ರಾಹುಲ್ ಗಾಂಧಿ ಭಾರತದ ಮಾನ ಹರಾಜು ಹಾಕುತ್ತಿದಾರೆ. ಕಾಂಗ್ರೆಸ್ ಮೀಸಲಾತಿ, ಸಾಮಾಜಿಕ ನ್ಯಾಯದ ವಿರೋಧಿ. ನೆಹರು, ಇಂದಿರಾ, ರಾಜೀವ್ ಗಾಂಧಿ ಹೇಳಿಕೆ ಗಮನಿಸಿದರೆ ಕಾಂಗ್ರೆಸ್ ಸಾಮಾಜಿಕ ವಿರೋಧಿ ಅನ್ನೋದು ಸ್ಪಷ್ಟವಾಗುತ್ತೆ ಎಂದು ವಾಗ್ದಾಳಿ ಮಾಡಿದ್ದಾರೆ.
ಅಂಬೇಡ್ಕರ್ಗೆ ಅಪಮಾನ ಮಾಡಿದವರು ಕಾಂಗ್ರೆಸ್ನವರು. ಬಾಬು ಜಗಜೀವನ್ ರಾಮ್ಗೆ ಕಾಂಗ್ರೆಸ್ನಿಂದ ಅನ್ಯಾಯವಾಗಿದೆ. ದಲಿತರು, ಅಲ್ಪಸಂಖ್ಯಾತರನ್ನ ಮತಬ್ಯಾಂಕ್ ಮಾಡ್ಕೊಂಡಿದೆ. ರಾಹುಲ್ ಗಾಂಧಿ ಹೇಳಿಕೆಯನ್ನ ತೀವ್ರವಾಗಿ ಖಂಡಿಸುತ್ತೇನೆ. ರಾಜಕೀಯ ಟೀಕೆ ಭರದಲ್ಲಿ ಇಂಥ ಮಾತು ಸರಿಯಲ್ಲ. ದೇಶದ ಪ್ರತಿಷ್ಠೆಗೆ ರಾಹುಲ್ ಗಾಂಧಿ ಮಸಿ ಬಳಿಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.