ವಿಜಯಸಾಕ್ಷಿ ಸುದ್ದಿ, ಗದಗ : ಎಪಿಎಂಸಿ ಯಾರ್ಡ್ ನಲ್ಲಿ ದಲಾಲ ವರ್ತಕರ ಸಂಘ, ಖರೀದಿದಾರರ ಸಂಘದ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಪ್ರತಿಷ್ಠಾಪನೆ ಮಾಡಿರುವ ಗಣೇಶನಿಗೆ ಮಂಗಳವಾರ ಸಂಜೆ ವಿಶೇಷ ಪೂಜೆ, ಮನುಕುಲದ ಒಳಿತಿಗಾಗಿ, ರೈತರ, ವರ್ತಕರ, ಖರೀದಿದಾರರ ವ್ಯವಹಾರ ವೃದ್ಧಿಗಾಗಿ ಗಣಹೋಮ ನೆರವೇರಿಸಲಾಯಿತು.
ಹೋಮದ ಕಾರ್ಯಕ್ರಮದಲ್ಲಿ ಮಧುಸೂದನ್ ಪುಣೇಕರ, ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ಅಧ್ಯಕ್ಷ ತಿಮ್ಮಣ್ಣ ಕೋನರೆಡ್ಡಿ, ಗೌರವ ಅಧ್ಯಕ್ಷ ಪ್ರಮೋದ ವಾರಕರ, ಕಾರ್ಯದರ್ಶಿ ರಾಜಶೇಖರ ಮುಧೋಳ, ಉಪಾಧ್ಯಕ್ಷ ರಾಜು ಮೂಲಿಮನಿ, ಸಹ ಕಾರ್ಯದರ್ಶಿ ಚಂದ್ರಕಾಂತ ಸವದತ್ತಿ, ಖಜಾಂಚಿ ಮಹೇಶ ಗಾಣಗೇರ, ಸಹ ಖಜಾಂಚಿ ನೀತಿಶ ವಾಲಿ, ವಿನಾಯಕ ವಜ್ರೇಶ್ವರಿ, ವಿವೇಕಾನಂದ ಗುಡಿಮನಿ, ಕೊಟ್ರೇಶ ಬಾಳಿಕಾಯಿ, ಗಿರೀಶ ಅಳವಂಡಿ, ದಯಾನಂದ ಗುಂಡಪ್ಪನವರ, ವಿನಯ ಕಾಡಪ್ಪನವರ, ಸಾಗರ ವಜ್ರೇಶ್ವರಿ, ಮುತ್ತಣ್ಣ ಅಂಗಡಿ, ಅಜೀತ ಪುಣೇಕರ, ಮಂಜುನಾಥ ಕವಲೂರ, ಬಸವರಾಜ ಅಂಗಡಿ, ಮುರಗೇಶ ಬಡ್ನಿ, ಉಮೇಶ ಹುಬ್ಬಳ್ಳಿ, ಮಂಜುನಾಥ ಬೇಲೆರಿ, ತಾತನಗೌಡ ಪಾಟೀಲ, ದಲಾಲ ವರ್ತಕರ ಸಂಘದ ಹಾಗೂ ಖರೀದಿದಾರರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.