ವಿಜಯಸಾಕ್ಷಿ ಸುದ್ದಿ, ಗದಗ : ಹಳ್ಳಿಯ ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸಲು ಬಿಎಸ್‌ಎನ್‌ಎಲ್ ಪಾಪನಾಶಿಯ ಜೆ.ಜಿ. ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಓಎಲ್‌ಟಿ ಫೈಬರ್ ಆಪ್ಟಿಕ್ ಹೈಸ್ಪೀಡ್ ಇಂಟರ್‌ನೆಟ್ ಸೇವೆಯನ್ನು ಪ್ರಾರಂಭಿಸಿತು. ಉದ್ಘಾಟನೆಯನ್ನು ಬಿಎಸ್‌ಎನ್‌ಎಲ್ ಧಾರವಾಡ ಟೆಲಿಕಾಂನ ಜನರಲ್ ಮ್ಯಾನೇಜರ್ ಧನಂಜಯ್ ಕುಮಾರ್ ತ್ರಿಪಾಠಿ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಬಿಎಸ್‌ಎನ್‌ಎಲ್‌ನ ರಾಜೇಶ ಕ್ಪದಂ, ಶಾಲೆಯ ಚೇರಮನ್ ಆಯ್.ಎಸ್. ಪೂಜಾರ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಧನಂಜಯ್ ಕುಮಾರ್ ತ್ರಿಪಾಠಿ ಮಾತನಾಡಿ, ಬಿಎಸ್‌ಎನ್‌ಎಲ್ ಹೈಸ್ಪೀಡ್ ಇಂಟರ್‌ನೆಟ್ ಎಲ್ಲಾ ಜನರಿಗೆ ತಲುಪಿಸಲು ಈ ಓಎಲ್‌ಟಿಯನ್ನು ಸ್ಥಾಪನೆ ಮಾಡಿದ್ದೇವೆ. ಇದರ ಸದುಪಯೋಗವನ್ನು ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಡಿವಿಜನಲ್ ಇಂಜಿನಿಯರ್ ಹುಚ್ಚಪ್ಪ ಶಿರಹಟ್ಟಿ, ಚಂದ್ರಕಾಂತ್ ಚವ್ಹಾಣ, ಭರತ್, ಸಂಜಯ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.