ಮಂಡ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆ: ರಾಜ್ಯ ಸರ್ಕಾರದ ವಿರುದ್ಧ HDK ಆಕ್ರೋಶ!

0
Spread the love

ಮಂಡ್ಯ:- ಮಂಡ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಹಿಂದೂ-ಮುಸ್ಲೀಂ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Advertisement

ಪ್ರಕರಣ ಸಂಬಂಧ ಎಸ್‌ಪಿ ಜೊತೆ ಮಾತನಾಡಿದ್ದೇನೆ. ಸಾಯಂಕಾಲ ನಡೆದ ಮೆರವಣಿಗೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಆಗಿದೆ ಎಂದರು. ಇದು ಉಲ್ಬಣ ಆಗದಂತೆ ನೋಡಿಕೊಳ್ಳಿ. ಕಠಿಣ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ನಾನು ದೆಹಲಿಯಿಂದ ಬಂದ ತಕ್ಷಣ ಸ್ಥಳ ಪರಿಶೀಲನೆ ಮಾಡ್ತೀನಿ. ಇದನ್ನು ಇಲ್ಲಿಗೆ ನಿಲ್ಲಿಸುವುದು ಒಳ್ಳೆಯದು. ಬೇರೆ ರೀತಿಯಲ್ಲಿ ತೆಗೆದುಕೊಂಡು ಹೋಗಿ ಜನರಲ್ಲಿ ಅಶಾಂತಿ ಉಂಟು ಮಾಡಬಾರದು. ಅಮಾಯಕರ ಸಾವು-ನೋವಾಗಬಾರದು ಎಂದು ಎರಡೂ ಗುಂಪುಗಳಲ್ಲಿ ನಾನು ಮನವಿ ಮಾಡುತ್ತೇನೆ ಎಂದರು.

ಸರ್ಕಾರ ಯಾವುದೋ ಒಂದು ಗುಂಪು ಓಲೈಸಿಕೊಂಡು ಹೋಗುವ ಕೆಲಸ ಮಾಡುತ್ತಿದೆ. ಇದರಿಂದಲೇ ಅವರಲ್ಲಿ ಒಂದು ರೀತಿಯ ಉದ್ಧಟತನ ಪ್ರಾರಂಭವಾಗಿದೆ. ಇಂತಹ ಘಟನೆಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಒಂದು ಗುಂಪನ್ನು ಓಲೈಸಿದರೆ, ನಾವು ಏನು ಮಾಡಿದರೂ ಸರ್ಕಾರ ನಮ್ಮ ರಕ್ಷಣೆಗಿದೆ ಎಂಬ ಭಾವನೆ ಬರುತ್ತದೆ. ಹೀಗಾಗಿ ಇಂತಹ ಘಟನೆಗಳಿಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.

ಇಂತಹ ಪ್ರಕರಣಗಳಿಂದ ಅಮಾಯಕರು ತೊಂದರೆ ಒಳಗಾಗುತ್ತಾರೆ. ಆದರೆ ಅಪರಾಧಿಗಳಿಗೆ ಏನೂ ಆಗಲ್ಲ. ತಕ್ಷಣ ಇದನ್ನು ತಹಬದಿಗೆ ತಂದು, ಪ್ರಕರಣದ ಹಿಂದೆ ಇರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದರು.


Spread the love

LEAVE A REPLY

Please enter your comment!
Please enter your name here