HomeBengaluru Newsನನಗೆ ವಿರೋಧ ಪಕ್ಷದ ಸರ್ಟಿಫಿಕೆಟ್​ ಬೇಕಿಲ್ಲ: ಸಚಿವ ಜಿ ಪರಮೇಶ್ವರ್ ಸಿಡಿಮಿಡಿ!

ನನಗೆ ವಿರೋಧ ಪಕ್ಷದ ಸರ್ಟಿಫಿಕೆಟ್​ ಬೇಕಿಲ್ಲ: ಸಚಿವ ಜಿ ಪರಮೇಶ್ವರ್ ಸಿಡಿಮಿಡಿ!

For Dai;y Updates Join Our whatsapp Group

Spread the love

ಬೆಂಗಳೂರು:- ನನಗೆ ವಿರೋಧ ಪಕ್ಷದ ಸರ್ಟಿಫಿಕೆಟ್​ ಬೇಕಿಲ್ಲ ಎಂದು ಸಚಿವ ಜಿ ಪರಮೇಶ್ವರ್ ಸಿಡಿಮಿಡಿಗೊಂಡಿದ್ದಾರೆ.

ನಾಗಮಂಗಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ಮಂಡ್ಯದ ನಾಗಮಂಗಲ ಘಟನೆಯನ್ನ ರಾಜಕೀಯ ಮಾಡಬೇಡಿ ಎಂದಿದ್ದರೂ ವಿಪಕ್ಷದವರು ರಾಜಕೀಯ ಮಾಡ್ತಿದ್ದಾರೆ. ಮಾಡಲಿ, ಅದನ್ನು ಹ್ಯಾಂಡಲ್ ಮಾಡೋದು ನಮ್ಗೂ ಗೊತ್ತಿದೆ.

ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಹಿರಿಯ ಅಧಿಕಾರಿಗಳು, ಡಿಜಿಯವರು, ಎಡಿಜಿ ಲಾ ಅಂಡ್ ಆರ್ಡರ್ ಇವರೆಲ್ಲ ಸೇರಿ ಸಭೆ ಮಾಡಿ ಸೂಚನೆ ಕೊಟ್ಟಿರುತ್ತಾರೆ. ಸರ್ಕಾರದಿಂದ ನಾವು ಕೂಡ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಸೂಚಿಸಿರುತ್ತೇವೆ. ನಾಗಮಂಗಲದಲ್ಲಿ ಕೆಎಸ್​ಆರ್​ಪಿ ವ್ಯಾನ್ ಸಮೇತ ಇದ್ದರು. ಘಟನೆ ನಡೆದು ಅರ್ಧ ಗಂಟೆಯಲ್ಲಿ ಎಸ್​ಪಿ, ಐಜಿಯವರು ಸ್ಥಳಕ್ಕೆ ಬಂದು ತಕ್ಷಣ ಗಲಾಟೆ ನಿಲ್ಲಿಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದ್ದು ವರದಿ ಕೊಡಿ ಎಂದು ಕೇಳಿದ್ದೇವೆ ಎಂದರು.

ನಾಗಮಂಗಲ ಈಗ ಕಂಟ್ರೋಲ್​ನಲ್ಲಿದ್ದು ಮಾನಿಟರ್ ಮಾಡ್ತಿದ್ದಾರೆ. ಪೊಲೀಸರು ಅಲ್ಲಿ ಕ್ಯಾಂಪ್ ಮಾಡಿದ್ದಾರೆ. ಶಾಂತಿಯಿಂದ ಇದ್ದು ಶಾಂತಿ ಸಭೆ ಕೂಡ ಮಾಡ್ತಿದ್ದಾರೆ. ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಲಾಗಿದೆ.

ಘಟನೆಗೆ ಕಾರಣಗಳೇನು ಎಂಬುದರ ಕುರಿತು ವರದಿ ನೀಡುವಂತೆ ಈಗಾಗಲೇ ಸೂಚಿಸಿದ್ದೇನೆ‌. ವರದಿ ಬಂದ ನಂತರ ಕಾನೂನು ಚೌಕಟ್ಟಿನಲ್ಲಿ ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ. ಕಾನೂನಿಗಿಂತ ಯಾರು ದೊಡ್ಡವರಲ್ಲ. ಗಣೇಶನ ಹಬ್ಬ ಸೇರಿದಂತೆ ಬೇರೆ ಹಬ್ಬಗಳಲ್ಲಿ ಗೊಂದಲ ಸೃಷ್ಟಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಂತವರನ್ನು ಬಿಡಲ್ಲ. ಕಾನೂನು ಪ್ರಕಾರ ಅವರ ಮೇಲೆ ಕಟ್ಟುನಿಟ್ಟಾಗಿ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಆಕಸ್ಮಿಕವಾಗಿ ಗೃಹಸಚಿವರಾಗಿ ಆಯ್ಕೆಯಾಗಿದ್ದಾರೆ ಎನ್ನುವ ಬಿಜೆಪಿ ನಾಕಯಕ ಹೇಳಿಕೆಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಗರಂ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಶಬ್ಧಗಳನ್ನು ಟ್ವಿಸ್ಟ್ ಮಾಡಿ ಹೇಳುವುದಕ್ಕೆ ಬರಲ್ಲ. ನಿಮಗೆ ಬೇಕಾದಂಗೆ ಟ್ವಸ್ಟ್ ಮಾಡಿಕೊಂಡರೆ ಏನು ಮಾಡೋಕೆ ಆಗಲ್ಲ. ನಮಗೆ ಜವಾಬ್ದಾರಿ ಇದೆ. ರಾಜ್ಯದಲ್ಲಿ ಜಾವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಇವರ ಸರ್ಟಿಫಿಕೆಟ್​ ಬೇಕಾಗಿಲ್ಲ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!